ದಲಿತ ನಾಯಕರು ಬೆಳೆದಾಗ ಜಾತಿವಾದಿಗಳು ಪಟ್ಟಭದ್ರಹಿತಾಶಕ್ತಿಗಳು ತುಳಿಯುತ್ತಾರೆ- ಪ್ರಸನ್ನಾನಂದಪುರಿ ಸ್ವಾಮೀಜಿ…

Promotion

ಬೆಂಗಳೂರು,ಮಾರ್ಚ್,16,2021(www.justkannada.in): ದಲಿತ ನಾಯಕರು ಬೆಳೆದಾಗ ಜಾತಿವಾದಿಗಳು ಪಟ್ಟಭದ್ರಹಿತಾಶಕ್ತಿಗಳು ತುಳಿಯುತ್ತಾರೆ ಎಂದು  ಪ್ರಸನ್ನಾನಂದಪುರಿ ಸ್ವಾಮೀಜಿಗಳು ಹೇಳಿದರು.jk

ಸದಾಶಿವನಗರದ ನಿವಾಸದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಭೇಟಿಯಾಗಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಕೆಲ ಕಾಲ ಚರ್ಚೆ ನಡೆಸಿದರು. ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಯುತ್ತಿದೆ. ಎಲ್ಲಾ ಸತ್ಯಾಸತ್ಯತೆ ಹೊರ ಬರುತ್ತಿದೆ. ಕಾಲವೇ ತಕ್ಕ ಉತ್ತರ ನೀಡಲಿದೆ. ಅಂತಹ ಸಂದರ್ಭ ಬರುತ್ತೆ ಎಂದರು.ramesh jarakiholi-meet-prasannananda pur swamiji-bangalore

ರಮೇಶ್ ಜಾರಕಿಹೊಳಿಗೆ ಧೈರ್ಯ ಹೇಳಲು ಭೇಟಿ ಮಾಡಿದ್ದವು. ದಲಿತ ನಾಯಕರು ಬೆಳೆದಾಗ ಜಾತಿವಾದಿಗಳು ಪಟ್ಟಭದ್ರಹಿತಾಶಕ್ತಿಗಳು ತುಳಿಯುತ್ತಾರೆ. ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಾರೆ. ಕಾಲವೇ ಉತ್ತರ ಕೊಡುತ್ತದೆ. ಅಂತಹ ಸಂದರ್ಭ ಬರುತ್ತದೆ. ರಮೇಶ್ ಜಾರಕಿಹೊಳಿ ಆರೋಪದಿಂದ ಹೊರಬರುತ್ತಾರೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

Key words: ramesh jarakiholi-meet-prasannananda pur swamiji-bangalore