Wednesday, July 29, 2026

BDA Apartments

Home Front Page ಅರಸು ಪ್ರತಿಮೆ ಪ್ರತಿಷ್ಠಾಪನ  ಸಮಿತಿಯಿಂದ ಮೈಸೂರು ವಿ.ವಿ.ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರಿಗೆ ಅಭಿನಂದನೆ….

ಅರಸು ಪ್ರತಿಮೆ ಪ್ರತಿಷ್ಠಾಪನ  ಸಮಿತಿಯಿಂದ ಮೈಸೂರು ವಿ.ವಿ.ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರಿಗೆ ಅಭಿನಂದನೆ….

 

ಮೈಸೂರು,ಮಾರ್ಚ್,16,2021(www.justkannada.in): ಅರಸು ಪ್ರತಿಮೆ ಪ್ರತಿಷ್ಠಾಪನ  ಸಮಿತಿ ವತಿಯಿಂದ ಮೈಸೂರು ವಿ.ವಿ.ಕುಲಪತಿಗಳಾದ ಪ್ರೊ.ಜಿ. ಹೇಮಂತ್ ಕುಮಾರ್ ರವರಿಗೆ ಅಭಿನಂದಿಸಲಾಯಿತು.jk

ಇಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿಗಳ ಕಚೇರಿಯಲ್ಲಿ ಅರಸು ಪ್ರತಿಮೆ ಪ್ರತಸ್ಥಾಪನ ಸಮಿತಿ ವತಿಯಿಂದ ಮೈಸೂರು ವಿ.ವಿ.ಕುಲಪತಿಗಳಾದ ಪ್ರೊ.ಜಿ. ಹೇಮಂತ್ ಕುಮಾರ್ ರವರಿಗೆ ಅಭಿನಂದಿಸಲಾಯಿತು.

ಶ್ರೀವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ವತಿಯಿಂದ ಶ್ರೀವನಕಲ್ಲು ಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ -2021ರ ಅಂಗವಾಗಿ   ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ  ಆಯೋಜನೆ ಮಾಡಲಾಗಿತ್ತು. ಸಮಾಜಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆಯನ್ನ ಪರಿಗಣಿಸಿ ಪ್ರೊ. ಜಿ. ಹೇಮಂತ್ ಕುಮಾರ್ ಅವರನ್ನ ಜಗಜ್ಯೋತಿ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿರುವ ವಿಷಯ ತಿಳಿದ  ಅರಸು ಪ್ರತಿಮೆ ಪ್ರತಿಷ್ಠಪಾನ  ಸಮಿತಿ ವತಿಯಿಂದ ಅಭಿನಂದಿಸಲಾಯಿತು.Mysore university -VC- Prof.G. Hemanth Kumar-Congratulations 

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ,ಭಾವಿ ಕ.ಸಾ.ಪ.ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್,ಕ.ಸಾ.ಪ.ನಿಕಟಪೂರ್ವ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಕದಂಬ ರಂಗವೇದಿಕೆ ಅಧ್ಯಕ್ಷರಾದ ರಾಜಶೇಖರ ಕದಂಬ, ಅರಸು ಪ್ರತಿಮೆ ಪ್ರತಸ್ಥಾಪನ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್, ರಾಜ್ಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ್,ಕೆ.ಪಿ.ಸಿ.ಸಿ ಸದಸ್ಯರಾದ ಪಿ.ರಾಜು ಮತ್ತು ಕೃಷ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು.

key words: Mysore university -VC- Prof.G. Hemanth Kumar-Congratulations