ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ಪರ ವಕೀಲ ದೂರಿನ ಬಗ್ಗೆ ಹೇಳಿದ್ದೇನು ಗೊತ್ತೆ…?

Promotion

ಬೆಂಗಳೂರು,ಮಾರ್ಚ್,26,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಅಜ್ಞಾತ ಸ್ಥಳದಿಂದ 3ನೇ ವಿಡಿಯೋ ಬಿಡುಗಡೆ ಮಾಡಿ ವಕೀಲರ ಮೂಲಕ  ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಿರುವುದಾಗಿ ಹೇಳಿದ್ದಾರೆ.jk

ಯುವತಿಯಿಂದ ದೂರಿನ ಪ್ರತಿ ಸ್ವೀಕರಿಸಿರುವ ವಕೀಲ ಜಗದೀಶ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ, ಯುವತಿಯೇ ಸ್ವತಃ ದೂರು ಬರೆದು ನೀಡಿದ್ದಾರೆ . ದೂರು ನೀಡುತ್ತಿರುವುದು ರಾಜ್ಯದ ಪ್ರಭಾವಿ ವ್ಯಕ್ತಿ ವಿರುದ್ದ. ಅಲ್ಲದೆ  ಭದ್ರತೆ ಕಾರಣದಿಂದ ನಮ್ಮ ಮುಖಾಂತರ ಯುವತಿ ದೂರು ನೀಡುತ್ತಿದ್ದಾರೆ. ದೂರಿನ ಪ್ರತಿಯನ್ನ ಮಧ್ಯಾಹ್ನ 2.30ಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತೇನೆ ಎಂದು ವಕೀಲ ಜಗದೀಶ್. ಹೇಳಿದ್ದಾರೆ.

ಸದ್ಯಕ್ಕೆ ಯುವತಿಗೆ ಸಹಾಯ ಮಾಡುತ್ತಿದ್ದೇವೆ ಅಷ್ಟೆ. ಸತ್ಯಾಂಶ ತನಿಖೆ ಬಳಿಕ ಹೊರ ಬರುತ್ತದೆ. ನಾವು ಯಾವುದೇ ರೀತಿ ದೂರು ನೀಡುತ್ತಿಲ್ಲ. ಯುವತಿ ಕೊಟ್ಟ ದೂರಿನ ಪ್ರತಿ ನೀಡುತ್ತಿದ್ದೇವೆ ಅಷ್ಟೆ. ಕಳೆದ ಕೆಲದಿನಗಳಿಂದ ವಿಡಿಯೋ ಹರಿದಾಡುತ್ತಿವೆ. ಹೀಗಾಗಿ ಫೇಸ್ ಬುಕ್ ಮೂಲಕ ಮನವಿ ಮಾಡಿದ್ದವು. ಕಾನೂನು ನೆರವು ನೀಡುವುದಾಗಿ ಹೇಳಿದ್ದವು.complain-against-ramesh-jarakiholi-3rd-video-release-young-woman

ನಮ್ಮನ್ನ ನಂಬಿ ಯುವತಿ ಮುಂದೆ ಬಂದಿದ್ದಾರೆ. ಇನ್ನೆರೆಡು ದಿನಗಳಲ್ಲಿ ಯುವತಿ ಹೊರಗೆ ಬರಬಹುದು. ನಾವು ಯಾವುದೇ ದೂರು ನೀಡಿಲ್ಲ. ಯುವತಿ ನೀಡಿದ ದೂರಿನ ಪ್ರತಿ ಸಲ್ಲಿಸುತ್ತಿದ್ದೇನೆ. ಮುಂದಿನ ನಿರ್ಧಾರ ಪೊಲೀಸ್ ಆಯುಕ್ತರಗೆ ಬಿಟ್ಟಿದ್ದು  ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.

Key words: Ramesh jarakiholi- CD case-lawyer-Jagdish- complaint – young woman