ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಿದ್ದೇನೆ- ಯುವತಿಯಿಂದ 3ನೇ ವಿಡಿಯೋ ರಿಲೀಸ್…

ಬೆಂಗಳೂರು,ಮಾರ್ಚ್,26,2021(www.justkannada.in):  ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ಯುವತಿ ಇದೀಗ 3ನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ.jk

ಮೂರನೇ ವಿಡಿಯೋ ರಿಲೀಸ್ ಮಾಡಿರುವ ಯುವತಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ  ದೂರು ನೀಡುವುದಾಗಿ ಹೇಳಿದ್ದಾರೆ. ಇಂದು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ನಾನು 24 ದಿನಗಳಿಂದ ಜೀವ ಭಯ, ಜೀವ ಬೆದರಿಕೆಯಲ್ಲಿದ್ದೆ.  ಎಲ್ಲಾ ಪಕ್ಷದ ನಾಯಕರು, ಸಂಘಟನೆಗಳು ರಾಜ್ಯದ ಜನರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ.  ಧೈರ್ಯ ಬಂದಿದ್ದರಿಂದ ರಮೇಶ್ ಜಾರಕಿಹೊಳಿ ವಿರುದ್ದ ದೂರು ನೀಡುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.complain-against-ramesh-jarakiholi-3rd-video-release-young-woman

ಎಲ್ಲ ಪಕ್ಷದ ನಾಯಕರು, ರಾಜ್ಯದ ಜನರು ನನಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ವಕೀಲ ಜಗದೀಶ್ ಅವರ ಮೂಲಕ ಇಂದು ರಮೇಶ್ ಜಾರಕಿಹೊಳಿ  ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

Key words:  complain –against- Ramesh jarakiholi-3rd video- release – young woman.