‘ದರ್ಬಾರ್’ ಬಳಿಕ ಮುಂದಿನ ಸಿನಿಮಾಗೆ ತಲೈವಾ ರೆಡಿ !

Promotion

ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ಸಿರುತೈ ಶಿವ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಜನಿಕಾಂತ್‌ ಅವರು ನಾಯಕನಾಗಿ ನಟಿಸಲಿದ್ದಾರೆ.

ತಿಂಗಳ ಹಿಂದೆ ಸಿರುತೈ ಶಿವ  ರಜನಿಕಾಂತ್‌ ಅವರ ಜೊತೆ ಚಿತ್ರಕತೆ ಬಗ್ಗೆ ಮಾತುಕತೆ ನಡೆಸಿದ್ದರು. ಚಿತ್ರದಲ್ಲಿ ನಟಿಸಲು ರಜನಿಕಾಂತ್‌ ಉತ್ಸಾಹ ತೋರಿಸಿದ್ದರು.

ಚಿತ್ರಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವಂತೆ ಆಗ ತಿಳಿಸಿದ್ದಾರೆನ್ನಲಾಗಿದೆ.
ಈ ಸಿನಿಮಾ ‘ದರ್ಬಾರ್‌’ ಚಿತ್ರದ ಕೆಲಸಗಳು ಮುಗಿದ ಕೂಡಲೇ ಸೆಟ್ಟೇರಲಿದೆ.