ಶ್ರೀಮುರಳಿ ‘ಭರಾಟೆ’ ರಿಲೀಸ್ ಡೇಟ್ ಫಿಕ್ಸ್ ಆಯ್ತು !

ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ನಟ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.

ಅಕ್ಟೋಬರ್ 18 ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡಯಾಗಲಿದೆ. ಈ ವಿಚಾರವನ್ನು ಸ್ವತಃ ಶ್ರೀಮುರಳಿ ಖುಷಿಯಿಂದ ಹಂಚಿಕೊಂಡಿದ್ದಾರೆ.

ಶ್ರೀಮುರಳಿ ಮತ್ತು ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಭರಾಟೆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಇತ್ತೀಚೆಗಷ್ಟೇ ರಿಲೀಸ್ ಆದ ಆಕ್ಷನ್ ಟೀಸರ್ ಕೂಡಾ ಭಾರೀ ಸೌಂಡ್ ಮಾಡಿತ್ತು.