ಜಾನಕಿ ಎಂದು ಮಗಳಿಗೆ ಹೆಸರಿಟ್ಟ ಶೃತಿ ಹರಿಹರನ್ ದಂಪತಿ

ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ನಟಿ ಶ್ರುತಿ ಹರಿಹರನ್-ರಾಮ್ ಕಲರಿ ದಂಪತಿ ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ.

ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ತಮ್ಮ ಮಗಳಿಗೆ ‘ಜಾನಕಿ’ ಎಂದು ಹೆಸರಿಟ್ಟಿದ್ದಾರೆ.

ಸಾಂಪ್ರದಾಯಿಕವಾಗಿ ಕುಟುಂಬಸ್ಥರ ಜೊತೆ ಮಗಳಿಗೆ ನಾಮಕರಣ ಮಾಡಿದ್ದು, ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದಾರೆ.