ವೋಟ್ ಮೋದಿಗೆ : ಕೆಲಸಕ್ಕೆ ನಾನ್ ಬೇಕಾ..?- ಬಸ್ ತಡೆದ ವೈಟಿಪಿಎಸ್ ಸಿಬ್ಬಂದಿ ವಿರುದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೆಂಡಾಮಂಡಲ..

Promotion

ರಾಯಚೂರು,ಜೂ,26,2019( www.justkannada.in): ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಇಂದು ಗ್ರಾಮ ವಾಸ್ತವ್ಯಕ್ಕಾಗಿ ತೆರಳುತ್ತಿದ್ದ ವೇಳೆ ತಾವು ಪ್ರಯಾಣಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಅನ್ನ ತಡೆದ ವೈಟಿಪಿಎಸ್ ಸಿಬ್ಬಂದಿ ವಿರುದ್ದ  ಸಿಎಂ ಹೆಚ್,ಡಿ ಕುಮಾರಸ್ವಾಮಿ ಕೆಂಡಾಮಂಡಲರಾದ ಘಟನೆ ನಡೆದಿದೆ.

ಕರೇಗುಡ್ಡ ಗ್ರಾಮಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಬಸ್‌ ತಡೆದು ವೈಟಿಪಿಎಸ್ ಸಿಬ್ಬಂದಿ ಘೇರಾವ್‌ ಹಾಕಿ ತಮ್ಮ ಸಮಸ್ಯೆ ತೋಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ  ವೈಟಿಪಿಎಸ್ ಸಿಬ್ಬಂದಿ ವರ್ತನೆಗೆ ಗರಂ ಆದ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ನೀವು ನರೇಂದ್ರ ಮೋದಿಗೆ ವೋಟ್‌ ಹಾಕ್ತೀರಿ, ಸಮಸ್ಯೆ ಬಗೆ ಹರಿಸಲು ನಮ್‌ ಹತ್ರ ಬರ್ತೀರಾ , ನಿಮಗೆಲ್ಲಾ ಮರ್ಯಾದೆ ಕೊಡಬೇಕಾ? ಲಾಠಿ ಚಾರ್ಜ್‌ ಮಾಡಿಸ್ಬೇಕಾ ಎಂದು ಕಿಡಿ ಕಾರಿದರು.

ಈ ನಡುವೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಸ್‌ನಿಂದ ಕೆಳಗಿಳಿಯಲು ಮುಂದಾದಾಗ  ಸಚಿವ ವೆಂಕಟರಾವ್‌ ಸಚಿವ ನಾಡಗೌಡ ಅವರು ತಡೆದರು. ಅಣ್ಣಾ..ನಾನು ಇಳಿಯುತ್ತೇನೆ ನೀವು ಕುಳಿತುಕೊಳ್ಳಿ ಎಂದು ಸಮಾಧಾನಪಡಿಸಿದರು.

Key words: raichur –CMHDKumaraswamy-outrage- against YTPS staff