Wednesday, September 30, 2026

BDA Apartments

ಕಾಂಗ್ರೆಸ್ ಸೋಲಿಗೆ ಮೈತ್ರಿ ಕಾರಣ ಎಂದು ಹೇಳೀಕೆ ನೀಡಿದ್ದ ‘ಕೈ’ ನಾಯಕರಿಗೆ ತಿ...
Home Front Page ಕಾಂಗ್ರೆಸ್ ಸೋಲಿಗೆ ಮೈತ್ರಿ ಕಾರಣ ಎಂದು ಹೇಳೀಕೆ ನೀಡಿದ್ದ ‘ಕೈ’ ನಾಯಕರಿಗೆ ತಿರುಗೇಟು ಕೊಟ್ಟ ಕೆಪಿಸಿಸಿ...

ಕಾಂಗ್ರೆಸ್ ಸೋಲಿಗೆ ಮೈತ್ರಿ ಕಾರಣ ಎಂದು ಹೇಳೀಕೆ ನೀಡಿದ್ದ ‘ಕೈ’ ನಾಯಕರಿಗೆ ತಿರುಗೇಟು ಕೊಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ…

ಬೆಂಗಳೂರು,ಜೂ,26,2019(www.justkannada.in):  ಕಾಂಗ್ರೆಸ್ ಸೋಲಿಗೆ ಮೈತ್ರಿ ಕಾರಣ ಎಂದು ಹೇಳಿಕೆ ನೀಡಿದ್ದ ಮಾಜಿ ಸಂಸದರಾದ ಕೆ.ಹೆಚ್ ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮೈತ್ರಿ ಕಾರಣವಲ್ಲ. ಬಿಜೆಪಿಯ ಅಪಪ್ರಚಾರವೇ ಕಾರಣ.  ಬಿಜೆಪಿಯ ಹುಸಿ ರಾಷ್ಟ್ರೀಯತೆ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳುವ ಮೂಲಕ ಮಾಜಿ ಸಂಸದರಾದ  ಕೆ.ಹೆಚ್ ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿ ಅವರಿಗೆ ಈಶ್ವರ್ ಖಂಡ್ರೆ ಟಾಂಗ್ ಕೊಟ್ಟರು.

ಬೆಂಗಳೂರಿನಲ್ಲಿ ಮಾಧ್ಯಮ ಗಳ ಜತೆ ಮಾತನಾಡಿ, ಸಿಎಂ ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್ ಗೆ ಸಲ್ಲುತ್ತೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ,  ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಹ ಪಾಲುದಾರ ಪಕ್ಷ. ಗ್ರಾಮವಾಸ್ತವ್ಯ, ಸಾಲಮನ್ನಾ ಕ್ರೆಡಿಟ್ ಎರಡು ಪಕ್ಷಗಳಿಗೆ ಸಲ್ಲುತ್ತದೆ. ಎರಡು ಪಕ್ಷಕ್ಕೆ ಸಮನಾಗಿ ಸಿಗುತ್ತೆ ಎಂದು ಹೇಳಿದರು.

Key words: KPCC – Ishwar Khandre-congress-lose-lokasabha-kh muniyappa-veerappamoily