ಆರೋಗ್ಯ ಸೇತು ಆ್ಯಪ್ ವಿರುದ್ಧ ಸಂಸದ ರಾಹುಲ್‍ ಗಾಂಧಿ ಕಿಡಿ

ಬೆಂಗಳೂರು, ಮೇ 03, 2020 (www.justkannada.in):: ಆರೋಗ್ಯ ಸೇತು ಆ್ಯಪ್ ವಿರುದ್ಧ ಸಂಸದ ರಾಹುಲ್ಗಾಂಧಿ
ಕಿಡಿ ಕಾರಿದ್ದಾರೆ.

 

ಕೊರೋನ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಕಡ್ಡಾಯಪಡಿಸಿರುವ ಇದೀಗ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ. ಒಬ್ಬ ಖಾಸಗಿ ಕಂಪನಿಯ ಉದ್ಯೋಗಿ ತನ್ನ ಮೊಬೈಲ್ನಲ್ಲಿ ಆಯಪ್ ಹೊಂದಿರದಿದ್ದರೆ, ಕಂಪನಿಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಆರೋಗ್ಯಸೇತು ಆಯಪ್ ನಯವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಇದನ್ನು ಖಾಸಗಿ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ. ಇದಕ್ಕೆ ಯಾವುದೇ ಸಾಂಸ್ಥಿಕ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ. ಇದು ಮಾಹಿತಿ ಸುರಕ್ಷೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.