ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ 3ನೇ ದಿನವೂ ಪ್ರತಿಭಟನೆ: ಡಿ.ಕೆ ಸುರೇಶ್ ಸೇರಿ ಹಲವರು ಪೊಲೀಸರ ವಶಕ್ಕೆ.

Promotion

ನವದೆಹಲಿ,ಜೂನ್,15,2022(www.justkannada.in):  ನ್ಯಾಷನಲ್ ಹೆರಲ್ಡ್ ಪತ್ರಿಕೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ  ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮೂರನೇ ದಿನವೂ ಪ್ರತಿಭಟನೆ ನಡೆಸಿದ್ದಾರೆ.

ಎಐಸಿಸಿ ಕಚೇರಿ ಎದುರು ಸಂಸದ ಡಿ.ಕೆ ಸುರೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಸೇರಿ ಹಲವು ನಾಯಕರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಿಳಿದರು. ಈ ವೇಳೆ ಕಾಂಗ್ರೆಸ್ ಕಚೇರಿ ಎದುರು ಹೈಡ್ರಾಮಾ ನಡೆದಿದ್ದು ಪ್ರತಿಭಟನಾಕಾರರು  ಪೊಲೀಸರೊಂದಿಗೆ ವಾಗ್ವಾದ ನಡೆಸಿ ನೂಕಾಟ ತಳ್ಳಾಟ ನಡೆಯಿತು.

ಈ ವೇಳೆ ಪೊಲೀಸರು ಸಂಸದ ಡಿ.ಕೆ ಸುರೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಸೇರಿ ಕಾಂಗ್ರೆಸ್ ಕಾರ್ಯಕರ್ತರನ್ನ ವಶಕ್ಕೆ ಪಡೆದರು.   ಈ ಸಮಯದಲ್ಲಿ ಮಾತನಾಡಿದ ಬಿ.ವಿ ಶ್ರೀನಿವಾಸ್, ನಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಬೇರೆ ರೀತಿಯ ವಾತಾವರಣ ಸೃಷ್ಠಿಯಾಗಿದೆ. ರಾಹುಲ್ ಗಾಂಧಿಗೆ ಕಿರುಕುಳ ನೀಡಲು ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ಮಾಡುವಷ್ಟು ದಿನ ಹೋರಾಟ ಮಾಡ್ತೀವಿ ಎಂದರು.

Key words: Rahul Gandhi-ED-congress- protests