ಇಲ್ಲಿ ಕಾನೂನು ಇದೆ: ಯುಪಿಯಲ್ಲಿ ಮಾಡಿದ್ರು ಅಂತಾ ಇಲ್ಲಿ ಮಾಡಲು ಆಗಲ್ಲ- ಬುಲ್ಡೋಜರ್ ಮಾದರಿಗೆ ಡಿಕೆಶಿ ಆಕ್ರೋಶ.

ಬೆಂಗಳೂರು,ಜೂನ್,15,2022(www.justkannada.in):  ಉತ್ತರ ಪ್ರದೇಶದಂತೆ ರಾಜ್ಯದ ಚಿಕ್ಕಮಗಳೂರಿನಲ್ಲಿ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಮಾದರಿ ಪ್ರಯೋಗ ಹಿನ್ನೆಲೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇಲ್ಲಿ ಕಾನೂನು ಇದೆ: ಯುಪಿಯಲ್ಲಿ ಮಾಡಿದ್ರು ಅಂತಾ ಇಲ್ಲಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಬುಲ್ಡೋಜರ್ ಮಾದರಿ ಹೇರಲು ಮುಂದಾದರೇ ಅಲ್ಲೆ ಮಲಗುತ್ತೇವೆ ಬುಲ್ಡೋಜರ್ ಹತ್ತಿಸುದ್ರೆ ಬುಲ್ಡೋಜರ್ ಅಡಿ ಮಲಗುತ್ತೇವೆ. ಉತ್ತರ ಪ್ರದೇಶದಲ್ಲಿ ಮಾಡಿದ್ರು ಅಂತ ಇಲ್ಲಿ ಮಾಡಲು ಆಗಲ್ಲ. ರಾಜ್ಯದಲ್ಲಿ ಬುಯಲ್ಡೋಜರ್ ಗೆಲ್ಲಾ ಅವಕಾಶ ಇಲ್ಲ ಎಂದರು.

ಇಲ್ಲಿ ಕಾನೂನು ಇದೆ. ಅಲ್ಪಸಂಖ್ಯಾತರನ್ನ ಉದ್ಧೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ.   ಹೆದರಿಸಬೇಕು ಬೆದರಿಸಬೇಕೆಂದು ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಅದು ಇಲ್ಲ ನಡೆಯಲ್ಲ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.

Key words: Uttar Pradesh- bulldozer –model-DK Shivakumar.