Monday, September 28, 2026

BDA Apartments

Home Front Page ರಾಹುಲ್ ಗಾಂಧಿ ಕುಂಕುಮ ಹಚ್ಚಿಕೊಂಡು ನಾಟಕ ಮಾಡ್ತಾರೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ರಾಹುಲ್ ಗಾಂಧಿ ಕುಂಕುಮ ಹಚ್ಚಿಕೊಂಡು ನಾಟಕ ಮಾಡ್ತಾರೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ,ಜನವರಿ,7,2023(www.justkannada.in):  ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಆರೋಪ – ಪ್ರತ್ಯಾರೋಪ  ಮುಂದುವರೆದಿದ್ದು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ , ಹಿಂದೂ ಹಾಗೂ ಹಿಂದುತ್ವಕ್ಕೆ ಏನು ವ್ಯತ್ಯಾಸವಿಲ್ಲ. ಹಿಂದು ದ್ವೇಷಿ ಸಿದ್ದರಾಮಯ್ಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಹುಲ್‌ ಗಾಂಧಿ , ಸಿದ್ದರಾಮಯ್ಯನವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅವರೇ ಕುಂಕುಮ ಹಚ್ಚಿಕೊಂಡು ನಾಟಕ ಮಾಡುತ್ತಾರೆ ಎಂದು ಕಿಡಿಕಾರಿದರು. ರಾಹುಲ್ ಗಾಂಧಿ ಕುಂಕುಮ ಹಚ್ಚಿಕೊಂಡು ನಾಟಕ ಮಾಡ್ತಾರೆ joshi

ಗಣರಾಜ್ಯೋತ್ಸವಕ್ಕೆ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆ ಕೋರ್ಟ್ ಮೊರೆ ಹೋಗುವುದಾಗಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಈ ಕುರಿತು ಕೋರ್ಟ್  ಮೊರೆ ಹೋಗುವುದರಿಂದ ಏನು ಆಗುವುದಿಲ್ಲ. ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಜೊತೆ ಮಾತನಾಡುತ್ತೇನೆ. 13 ವರ್ಷದಿಂದ ಸ್ತಬ್ದಚಿತ್ರ ಇತ್ತು. ಹೀಗಾಗಿ ಈ ವರ್ಷ ಇಲ್ಲ. ಕಳೆದ ಬಾರಿ ಕೇರಳ ಸ್ತಬ್ದ ಚಿತ್ರ ಇರಲಿಲ್ಲ . ಅವರು ಹೀಗೆ ಗಲಾಟೆ ಮಾಡಿದರು. ಪ್ರತಿ ವರ್ಷ ವಿವಾದ ಮಾಡೋದು ಸರಿಯಲ್ಲ ಎಂದರು.

Key words:  Rahul Gandhi – drama -Union Minister -Prahlad Joshi.