ಹತ್ತು ವರ್ಷಗಳ ಬಳಿಕ ‘ಲವ್ ಗುರು’ ಹಿಂದಿಗೆ ರಿಮೇಕ್ !

ಬೆಂಗಳೂರು, ಮಾರ್ಚ್ 12, ಮಾರ್ಚ್ 2020 (www.justkannada.in): ರಾಧಿಕಾ ಪಂಡಿತ್ ಮತ್ತು ತರುಣ್, ದಿಲೀಪ್ ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಲವ್ ಗುರು ರಿಮೇಕ್ ಆಗುತ್ತಿದೆ.

ಯೂಥ್ ಫುಲ್ ಟೆಕ್ಕಿಗಳ ಸ್ಟೋರಿ ಹೊಂದಿದ್ದ ಈ ಸಿನಿಮಾ 10 ವರ್ಷಗಳ ಬಳಿಕ ಹಿಂದಿಗೆ ರಿಮೇಕ್ ಆಗುತ್ತಿದೆ. ಸ್ವತಃ ನಿರ್ದೇಶಕ ಪ್ರಶಾಂತ್ ರಾಜ್ ಆ ವಿಚಾರ ಸ್ಪಷ್ಟಪಡಿಸಿದ್ದಾರೆ.

ಪ್ರಶಾಂತ್ ರಾಜ್ ಸ್ವತಃ ತಾವೇ ಹಿಂದಿಯಲ್ಲೂ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರಂತೆ. ಈಗಾಗಲೇ ಬಾಲಿವುಡ್ ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಸಿನಿಮಾ ನಿರ್ಮಿಸಲು ಮುಂದೆ ಬಂದಿದೆಯಂತೆ.