ಥಿಯೇಟರ್ ಜತೆಗೆ ಅಮೆಜಾನ್ ಪ್ರೈಂನಲ್ಲೂ ‘ಯುವರತ್ನ’ ರಿಲೀಸ್ ?!

Promotion

ಬೆಂಗಳೂರು, ಜನವರಿ 12, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಒಟಿಟಿ ಫಾರ್ಮ್ಯಾಟ್ ನಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಏಪ್ರಿಲ್ 1 ರಂದು ಥಿಯೇಟರ್ ಗಳಲ್ಲಿ ಯುವರತ್ನ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ ಒಟಿಟಿಯಲ್ಲೂ ಸಿನಿಮಾ ಬಿಡುಗಡೆಗೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಯುವರತ್ನ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಭಾರೀ ಮೊತ್ತಕ್ಕೆ ಅಮೆಜಾನ್ ಪ್ರೈಮ್ ಸಿನಿಮಾ ಖರೀದಿಸಿದೆ ಎನ್ನಲಾಗಿದೆ.