‘ಮಾಸ್ಟರ್’ಗೂ ಕಂಟಕ ತಂದ ‘ಲೀಕರ್ಸ್’ ! : ಶೇರ್ ಮಾಡಬೇಡಿ ಎಂದ ಮನವಿ ಮಾಡಿದ ಚಿತ್ರತಂಡ

ಬೆಂಗಳೂರು, ಜನವರಿ 12, 2020 (www.justkannada.in): ವಿಜಯ್ ನಟನೆಯ ‘ಮಾಸ್ಟರ್’ ಚಿತ್ರದ ದೃಶ್ಯಗಳು ಲೀಕ್ ಆಗಿದ್ದು, ಆ ವಿಡಿಯೋಗಳನ್ನು ಶೇರ್ ಮಾಡದಂತೆ ಚಿತ್ರತಂಡ ಮನವಿ ಮಾಡಿದೆ.

ಬಿಡುಗಡೆ ಹೊಸ್ತಿಲಲ್ಲೇ ಸಿನಿಮಾದ ವೀಡಿಯೋಗಳು ಸೋರಿಕೆಯಾಗಿರುವುದು ಚಿತ್ರದ ನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ.

ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್, ಸೋರಿಕೆಯಾದ ದೃಶ್ಯಗಳನ್ನು ಆನ್ ಲೈನ್, ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡದಂತೆ ಮನವಿ ಮಾಡಿದ್ದಾರೆ.

ಚಿತ್ರವನ್ನು ನಿರ್ಮಿಸಿರುವ ಎಕ್ಸ್ ಬಿ ಫಿಲ್ಮ್ ಕ್ರಿಯೇಟರ್ಸ್ ಕೂಡ ಸೋರಿಕೆಯಾದ ದೃಶ್ಯಗಳನ್ನು ಶೇರ್ ಮಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದೆ.