ಪಿಯು ಫಲಿತಾಂಶ ಹೆಚ್ಚಳ: ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲು ಮೈಸೂರು ವಿವಿ ಸಜ್ಜು

ಬೆಂಗಳೂರು, ಜುಲೈ 24, 2021 (www.justkannada.in): ಈ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಮೈಸೂರು ವಿವಿ ಸಿದ್ಧವಾಗಿದೆ. ಕಾಲೇಜಿಗೆ ದಾಖಲಾತಿ ಹೆಚ್ಚಿನ ಬೇಡಿಕೆ ಬಂದರೆ, ಹೆಚ್ಚುವರಿ ಸೀಟುಗಳನ್ನು ನೀಡಲು ಸಿದ್ದವಾಗಿರುವದಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಮಾಹಿತಿ ನೀಡಿದ್ದು, ಈ ಸಾಲಿನಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲು ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವರ್ಷ ಪಿಯುಸಿ ಫಲಿತಾಂಶ ಹೆಚ್ಚಾಗಿದ್ದು, ಪದವಿ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ ಖಾಸಗಿ ಕಾಲೇಜುಗಳು ಸೇರಿ 220 ಕಾಲೇಜುಗಳಿವೆ. ಎಲ್ಲೆಡೆಯೂ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಿದ್ಧತೆ ನಡೆಸಲಾಗಿದೆ.

ಅಕ್ಟೋಬರ್ 1 ರಿಂದ ಮೊದಲ ವರ್ಷದ ಪದವಿ ತರಗತಿಗಳು ಆರಂಭವಾಗಲಿದ್ದು, ಈ ವರ್ಷ 5 ಸಾವಿರ‌ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂದಾಜು 2 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ಪದವಿ ತರಗತಿಗಳಿಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ ಎಂದು ಹೇಮಂತ್ ಕುಮಾರ್ ತಿಳಿಸಿದ್ದಾರೆ.

english summery 

The University of Mysore is all set to enrol more students for degree courses this year. Prof. G. Hemanth Kumar, Vice-Chancellor, University of Mysore has said that the University is prepared to meet the increased demand.
Speaking about this today, Prof. G. Hemanth Kumar informed there has been an increase in the PUC results this year and the University of Mysore is all prepared to meet the increased enrolment. “220 colleges are running under University of Mysore, including private colleges. Preparations have been made to enrol students according to the demand,” he informed.
The degree classes will begin on October 1. It is expected five thousand additional students may enrol for degree courses this year and two lakh students will enrol for various degree courses in the state.
Keywords: University of Mysore/ Prof. G. Hemanth Kumar/ 2nd PUC/ results/ increase/ University all set/ demand/ enrolment