Sunday, September 20, 2026

BDA Apartments

ಪಿಎಸ್ ಐ ನೇಮಕಾತಿ ಹಗರಣ: ಆರೋಪಿ ಮನೆಯಲ್ಲಿ 20 ಲಕ್ಷ ರೂ. ಪತ್ತೆ BDA JK_Adv BDA Adv
Home Crime ಪಿಎಸ್ ಐ ನೇಮಕಾತಿ ಹಗರಣ: ಆರೋಪಿ ಮನೆಯಲ್ಲಿ 20 ಲಕ್ಷ ರೂ. ಪತ್ತೆ.

ಪಿಎಸ್ ಐ ನೇಮಕಾತಿ ಹಗರಣ: ಆರೋಪಿ ಮನೆಯಲ್ಲಿ 20 ಲಕ್ಷ ರೂ. ಪತ್ತೆ.

ಬೆಂಗಳೂರು,ಮೇ,14,2022(www.justkannada.in):  545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ .

ಆರೋಪಿ ಡಿವೈಎಸ್ಪಿ ಶಾಂತಕುಮಾರ್  ಅವರ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್​ನಲ್ಲಿರುವ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ . ಒಟ್ಟು ಎರಡು ವಾಹನಗಳಲ್ಲಿ ಶಾಂತಕುಮಾರ್ ಸಿನಿವಾಸಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.

ಇನ್ನು  ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಬಂಧಿತನಾಗಿರುವ ಶ್ರೀಧರ್ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದು ಈ ವೇಳೆ 20 ಲಕ್ಷ ರೂ. ಪತ್ತೆಯಾಗಿದೆ ಎನ್ನಲಾಗಿದೆ.ಪಿಎಸ್ ಐ ನೇಮಕಾತಿ ಹಗರಣ scam

ನೇಮಕಾತಿ ವಿಭಾಗದ ಪ್ರಥಮ ದರ್ಜೆ ನೌಕರ ಶ್ರೀಧರ್, ಮಧ್ಯವರ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆ ಮೇ 9ರಮದು ಬಂಧಿಸಲಾಗಿತ್ತು.  ಇಂದು ಸಿಐಡಿ ಅಧಿಕಾರಿಗಳು ಶ್ರೀಧರ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ 20 ಲಕ್ಷ ರೂ. ನಗದು ಪತ್ತೆಯಾಗಿದೆ.

Key words: PSI-recruitment-scam-20 lakh – accused