ನಾನು 100% ಸಚಿವ ಸಂಪುಟದಿಂದ ಔಟ್ ಆಗಲ್ಲ- ಸಚಿವ ಪ್ರಭು ಚೌವ್ಹಾಣ್ ವಿಶ್ವಾಸ.

ಯಾದಗಿರಿ,14,2022(www.justkannada.in):  ಸಚಿವ ಸಂಪುಟ ಪುನರಚನೆ ವೇಳೆ ನಾನು 100% ಸಂಪುಟದಿಂದ ಔಟ್ ಆಗಲ್ಲ. ನನ್ನನ್ನ ಸಂಫುಟದಿಂದ ತೆಗೆಯಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಯಾದಗಿರಿಯಲ್ಲಿ ಮಾತನಾಡಿದ ಸಚಿವ ಪ್ರಭು ಚೌವ್ಹಾಣ್, ನಾನು ನೂರಕ್ಕೆ ನೂರರಷ್ಠು ಸಂಪುಟದಿಂದ ಔಟ್ ಆಗಲ್ಲ. 32 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನನ್ನ ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಪಕ್ಷದ ಕಾರ್ಯಕರ್ತ, ಶಿಸ್ತಿನ ಸಿಪಾಯಿ ಎಂದು ನುಡಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದ್ದು ಕೆಲವು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Key words: I’m –-100% – not -out – cabinet-Minister- Prabhu Chauhan.