ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಖಚಿತ ?

ಮೈಸೂರು, ಮೇ 15, 2022 (www.justkannada.in): ಜೂನ್ 21 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಮೈಸೂರು ಸಂಸದ ಪ್ರತಾಪಸಿಂಹ ಈ ಬಗ್ಗೆ ಪ್ರಧಾನಿಯವರಿಗೆ ಮನವಿ ಮಾಡಿದ್ದು, ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೋದಿ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.

ಪ್ರಪಂಚದಾದ್ಯಂತ 190 ಕ್ಕೂ ಹೆಚ್ಚು ದೇಶಗಳು ಪ್ರತಿ ವರ್ಷ ಜೂನ್ 21 ರಂದು ಯೋಗ ದಿನಾಚರಣೆ ಆಚರಿಸುತ್ತವೆ.