ಕೊಲೆ ಪ್ರಕರಣ ಭೇದಿಸಿ ಮನೆಗೆ ಬಂದಿದ್ದ ಪಿಎಸ್ ಐ ಆತ್ಮಹತ್ಯೆಗೆ ಶರಣು…..

Promotion

ಹಾಸನ,ಜು,31,2020(www.justkannada.in):  ಕೊಲೆ ಪ್ರಕರಣವನ್ನ ಬೇಧಿಸಿ ಬೆಳಿಗ್ಗೆ ಮನೆಗೆ ಬಂದಿದ್ಧ ಪಿಎಸ್ ಐ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ಹಾಸನ ಜಿಲ್ಲೆ  ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯ ಪಿಎಸ್ ಐ ಕಿರಣ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಿಎಸ್ ಐ ಕಿರಣ್ ನಿನ್ನೆ ಮಧ್ಯೆ ರಾತ್ರಿ ಕೊಲೆ ಆರೋಪಿಯನ್ನು ಬಂಧಿಸಿ ಇಂದು ಬೆಳಗ್ಗೆ ಕಾನೂನು ಪ್ರಕ್ರಿಯೆ ಮುಗಿಸಿ ಬಳೀಕ ಮನೆಗೆ ಬಂದಿದ್ದರು.PSI- commits- suicide –house- hassan

ಈ ವೇಳೆ ಪಿಎಸ್ ಐ ಕಿರಣ್ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ನಂತರ ಅವರನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕಿರಣ್ ಮೃತಪಟ್ಟಿದ್ದಾರೆ. ಈ ಮೂಲಕ ಚಿಕ್ಕ ವಯಸ್ಸಿನಲ್ಲೇ ಕಿರಣ್ ಕುಮಾರ್ ತಮ್ಮ ಜೀವ ಕಳೆದುಕೊಂಡಿದ್ದಾರೆ.   ಕಿರಣ್ ಅವರು ಕಳೆದ ಒಂದು ವರ್ಷದಿಂದ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.PSI- commits- suicide –house- hassan

Key words: PSI- commits- suicide –house- hassan