ನಾಳೆ ಸಂಜೆ ಪ್ರಧಾನಿ ಮೋದಿ ಮಹತ್ವದ ಭಾಷಣ…

ನವದೆಹಲಿ,ಜು,31,2020(www.justkannada.in): ಕೊರೋನಾ ಅನ್ ಲಾಕ್ 2.0 ನಾಳೆ ಇಂದು ಮುಗಿಯಲಿದ್ದು ನಾಳೆ ಅನ್ ಲಾಕ್ 3.0 ಪ್ರಾರಂಭವಾಲಿದ್ದು, ಈ ನಡುವೆ   ಪ್ರಧಾನಿ ನರೇಂದ್ರ ಮೋದಿ  ನಾಳೆ ಸಂಜೆ ದೇಶವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಲಿದ್ದಾರೆ.jk-logo-justkannada-logo

ನಾಳೆ ಸಂಜೆ 4.30 ಕ್ಕೆ ಪ್ರಧಾನಿ ಮೋದಿ ಮಹತ್ವದ ಭಾಷಣ ಮಾಡಲಿದ್ದು, ನೂತನ ಶಿಕ್ಷಣ ನೀತಿ ಬಗ್ಗೆ ಹಾಗೂ ಕೊರೋನಾ ನಿಯಂತ್ರಣ  ಆನ್ ಲಾಕ್ 3.0 ಸೇರಿದಂತೆ ಮಹತ್ವದ ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಹೊಸ ಶಿಕ್ಷಣ ನೀತಿ ಕುರಿತು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.prime-minister-modi-speech-address-tomorrow-evening

34 ವರ್ಷಗಳ ನಂತರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು ನೂತನ ಶಿಕ್ಷಣ ನೀತಿಗೆ ಕಳೆದ ಎರಡು ದಿನಗಳ ಹಿಂದಷ್ಟೆ ಕೆಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರತಿದೆ. ಹೊಸ ಶಿಕ್ಷಣ ನೀತಿಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಕುರಿತು ಪ್ರಧಾನಿ ಮೋದಿ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

Key words: Prime Minister- Modi – speech-address- tomorrow -evening.