ಮಾಲೀಕನಿಂದಲೇ  ಹಮಾಲಿ ಕೊಲೆ ಕೇಸ್ ಖಂಡಿಸಿ ಪ್ರತಿಭಟನೆ: ರಣರಂಗವಾಯ್ತು ಎಪಿಎಂಸಿ ಮಾರುಕಟ್ಟೆ…

Promotion

ದಾವಣಗೆರೆ,ಮೇ,4,2019(www.justkannada.in):  ಮಾಲೀಕನೇ ಹಮಾಲಿಯನ್ನ ಕೊಲೆ ಮಾಡಿರುವ ಘಟನೆಯನ್ನ ಖಂಡಿಸಿ ಇಂದು ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ ಹಮಾಲಿಗಳು ಪ್ರತಿಭಟನೆ ನಡೆಸಿದರು.

ಹಮಾಲಿ ಬಸಾಪುರ ವೀರೇಶ್ ಎಂಬುವವರನ್ನ ಮಾಲೀಕ ಮೃತ್ಯುಂಜಯ  ಜ್ಯೋತಿ ಬಣ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಸಾಭೀತಾದ ಹಿನ್ನೆಲೆ ಇಂದು ಹಮಾಲಿಗಳು ದಾವಣಗೆರೆ ಎಪಿಎಂಸಿಯಲ್ಲಿ ಪ್ರತಿಭಟನೆ ನಡೆಸಿದರು. ಆರೋಪಿ ಮಾಲೀಕ ಮೃತ್ಯುಂಜಯ  ಜ್ಯೋತಿ ಬಣ  ಅಂಗಡಿ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನ ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವಿರೇಶ್ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.

ಏಪ್ರಿಲ್ 26 ರಂದು ಹಮಾಲಿ ಬಸಾಪುರ ವಿರೇಶ್ ಕೊಲೆಯಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು ತನಿಖೆ ವೇಳೆ ಮಾಲೀಕ ಮೃತ್ಯುಂಜಯನೇ ಕೊಲೆ ಮಾಡಿರುವುದಾಗಿ ಬಹಿರಂಗವಾಗಿದೆ. ವಿರೇಶ್ ನನ್ನ  ಮಾಲೀಕ ಮೃತ್ಯುಂಜಯ ಹತ್ಯೆ ಮಾಡಿ ಕಾರಿನಲ್ಲಿ ಇಟ್ಟು ಹಾವೇರಿಯ ರಾಣಿಬೆನ್ನೂರಿನ ಹಲಗೇರಿ ಬಳಿ ಕಾರು ಸಮೇತ ಸುಟ್ಟು ಹಾಕಿದ್ದನು ಎನ್ನಲಾಗಿದೆ.

Key words: protest- condemn –Hamali- murder- case – owner-APMC –Market-bandh