ಸೊಂಟದ ಮೂಳೆ ಮುರಿತ: ಗಾನಕೋಗಿಲೆ ಎಸ್ ಜಾನಕಿ  ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು…

ಮೈಸೂರು,ಮೇ,4,2019(www.justkannada.in):   ಮನೆಯಲ್ಲಿ ಬಿದ್ದು ಗಾನಕೋಗಿಲೆ  ಎಸ್.ಜಾನಕಿ ಅವರು ಸೊಂಟ ಮುರಿದುಕೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯೇ ಎಸ್.ಜಾನಕಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಸಂಬಂಧಿಕರ ಮನೆಗೆ  ಬಂದಿದ್ದ ಸಂದರ್ಭದಲ್ಲಿ ಎಸ್ ಜಾನಕಿ ಅವರು ಮನೆಯಲ್ಲಿ ಬಿದ್ದು ಸೊಂಟ ಮುರಿದುಕೊಂಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಇನ್ನು ಸೊಂಟದ ಭಾಗದಲ್ಲಿ ಫ್ರಾಕ್ಚರ್ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

Key words: fracture-S. Janaki-admit- Mysore- private hospital.