ಗೂಂಡಾಗಳ ರಕ್ಷಣಾ ತಂಗುದಾಣ: ವಿಧಾನ ಪರಿಷತ್ ರದ್ದು ಮಾಡಿ – ರೈತ ಮುಖಂಡ ಕುರುಬೂರು ಶಾಂತಕುಮಾರ್

Promotion

ಮೈಸೂರು,ಡಿಸೆಂಬರ್,17,2020(www.justkannada.in) : ವಿಧಾನ ಪರಿಷತ್ ಹಿರಿಯರ ಮನೆಯಾಗಿ ಉಳಿದ್ದಿಲ್ಲ.ಗೂಂಡಾಗಳ ರಕ್ಷಣಾ ತಂಗುದಾಣವಾಗಿದೆ.  ಹೀಗಾಗಿ, ವಿಧಾನ ಪರಿಷತ್ ರದ್ದು ಮಾಡಿ ಎಂದು  ರಾಜ್ಯ ರೈತ ಸಂಘಟನೆಗಳ ಒಕ್ಕೂಟ , ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.Teachers,solve,problems,Government,bound,Minister,R.Ashokವಿಧಾನ ಪರಿಷತ್ ನಲ್ಲಿ ನಡೆದ ನಡಾವಳಿಕೆಯು ಬೂ ಮಾಫಿಯ ಗೂಂಡಾಗಳ ರಕ್ಷಣಾ ತಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪರಿಷತ್ ನಲ್ಲಿ ನಡೆದ ನಡಾವಳಿಕೆಯಿಂದ ರಾಜ್ಯದ ಜನರು ತಲೆತಗ್ಗಿಸುವ ಹಾಗಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಹಣಬಲದಿಂದ ಸ್ಥಾನ ಖರೀದಿಸಿ ಕಾನೂನು ರಕ್ಷಣೆ ಪಡೆಯುವಂತಾಗಿದೆ. ಇಂತಹ ವಿಧಾನ ಪರಿಷತ್ ನಮ್ಮ ರಾಜ್ಯಕ್ಕೆ ಬೇಕಾಗಿಲ್ಲ ಕೂಡಲೆ ರದ್ದುಗೂಳಿಸಿ. ಇದರಿಂದ ರಾಜ್ಯಕೆ ಕನಿಷ್ಠ ೨೫೦ ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ರಾಜ್ಯದ ಮಾನ ಉಳಿಯುತ್ತವೆ ಎಂದು ಕಿಡಿಕಾರಿದ್ದಾರೆ.

Protection-goondas-Cancel-Method-Council-Farmer-leader- Kuruburu Shanthakumar

ಪಕ್ಕದ ತಮಿಳುನಾಡು, ತೆಲಂಗಾಣ ರದ್ದು ಗೂಳಿಸಿದ್ಧಾರೆ, ಅದೇ ರೀತಿ ರಾಜ್ಯದಲ್ಲಿಯು ರದ್ದುಗೂಳಿಸಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದಾರೆ.

key words : Protection-goondas-Cancel-Method-Council-Farmer-leader- Kuruburu Shanthakumar