ಮುಂದಿನ ಚುನಾವಣೆಗೆ ದುಡ್ಡು ಹೊಡೆಯಲು ಕಾರ್ಯಕ್ರಮ –ಸಿ.ಪಿ ಯೋಗೇಶ್ವರ್ ಗೆ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು.

Promotion

ರಾಮನಗರ,ಅಕ್ಟೋಬರ್,1,2022(www.justkannada.in): ರಸ್ತೆ ಕಾಮಗಾರಿ ಶಂಕು ಸ್ಥಾಪನೆ ವೇಳೆ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ ಹಿನ್ನೆಲೆ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್.ಡಿಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಮುಂದೆ 6 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಹೀಗಾಗಿ ದುಡ್ಡು ಹೊಡೆಯಲು ಕಾರ್ಯಕ್ರಮ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಭಯಕ್ಕೆ ಸಿಎಂ 50 ಕೋಟಿ ಹಣ ಕೊಟ್ಟಿದ್ದಾರೆ. ಎಲೆಕ್ಷನ್ ವೇಳೆ ನಾನು ಹೊರಗೆ ಬರಬಾರದು ಎಂದು ನನ್ನನ್ನ ಕಟ್ಟಿ ಹಾಕಲು ಈ ಹಣ ಕೊಟ್ಟಿದ್ದಾರೆ . ಅಧಿಕಾರ ಇದೆ ಅಂತ ಆಟ ಆಡಿದ್ರೆ ಸುಮ್ಮನಿರಲ್ಲ ಎಂದು ಟಾಂಗ್ ನೀಡಿದರು.

ಚೇಲಾಗಳನ್ನ ಇಟ್ಕೊಂಡು ಪೂಜೆ ಮಾಡಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಹಿನ್ನೆಲೆ ಧರಣಿ ಮಾಡಿದವರನ್ನ ಅರೆಸ್ಟ್ ಮಾಡಿಸ್ತೀರಾ..?  ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಶಕ್ತಿ ಕುಂದಿಸಲು ಆಗಲ್ಲ ಎಲ್ಲವೂ ರಾಮನಗರ ಜಿಲ್ಲೆ ಜನರಿಗೆ ಗೊತ್ತಿದೆ. ಮೈತ್ರಿ ಸರ್ಕಾರ ತಡೆಯಲು ಯಾವ ಪಾಪದ ಹಣ ತಂದ್ರು.  ಮೂರು ವರ್ಷದಿಂದ ಇವನು ಏನು ಮಾಡುತ್ತಿದ್ಧ. ಚುನಾವಣೆಗೆ ದುಡ್ಡು ಹೊಡೆಯಲು ಈಗ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಹೆಚ್.ಡಿಕೆ ಆರೋಪಿಸಿದರು.

Key words: program –money- next –election-HD Kumaraswamy- CP Yogeshwar.