Sunday, August 23, 2026

BDA Apartments

Home Cinema ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ! ರಿಷಬ್ ನಟನೆಗೆ ಜೈ ಎಂದ ಪ್ರಭಾಸ್

ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ! ರಿಷಬ್ ನಟನೆಗೆ ಜೈ ಎಂದ ಪ್ರಭಾಸ್

ಬೆಂಗಳೂರು, ಅಕ್ಟೋಬರ್ 01, 2022 (www.justkannada.in): ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಬಿಡುಗಡೆಯಾಗಿದ್ದು, ಎಲ್ಲೆಡೆ ಅಬ್ಬರಿಸುತ್ತಿದೆ. ರಿಷಬ್, ಕಿಶೋರ್ ನಟನೆ ಸೇರಿದಂತೆ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕರಾವಳಿ ಆಚರಣೆ ಕುರಿತು ತಿಳಿದುಕೊಂಡಿರುವವರು ಹಾಗೂ ಇದರ ಅರಿವೇ ಇಲ್ಲದವರು ಇಬ್ಬರೂ ಸಹ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಒಪೆನಿಂಗ್ ಅನ್ನು ಚಿತ್ರ ಪಡೆದಿದೆ.

ಮತ್ತೊಂದು ವಿಶೇಷ ಎಂದರೆ ಕಾಂತಾರ ಚಿತ್ರವನ್ನು ಕೇವಲ ಸಿನಿರಸಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ನೋಡಿ ಮೆಚ್ಚಿಕೊಂಡಿದ್ದಾರೆ.  ನಟ ಪ್ರಭಾಸ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರ ವೀಕ್ಷಿಸಿದ ನಂತರ ಚಿತ್ರ ಹೇಗಿದೆ ಎಂಬುದನ್ನು ತಮ್ಮ ಇನ್ ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಖಾತೆಗಳ ಸ್ಟೋರಿ ಮೂಲಕ ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರವನ್ನು ನೋಡಿ ಎಂಜಾಯ್ ಮಾಡಿದೆ, ಅದರಲ್ಲಿಯೂ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಯಿತು ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ.