ಶಿವಣ್ಣನ ‘ಆರ್‌ಡಿಎಕ್ಸ್‌’ಗೆ ನಾಯಕಿ ಆಗೋ ಚಾನ್ಸ್ ಪ್ರಿಯಾ ಆನಂದ್’ಗೆ ಸಿಕ್ತು

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಪ್ರಿಯಾ ಆನಂದ್ ಆರ್‌ಡಿಎಕ್ಸ್‌ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.

ಶಿವರಾಜ್‌ಕುಮಾರ್‌ ಅಭಿನಯದ ಆರ್‌ಡಿಎಕ್ಸ್‌ ಚಿತ್ರದ ಮುಹೂರ್ತ ನೆರವೇರಿದೆ. ಶಿವಣ್ಣ ಚಿತ್ರರಂಗಕ್ಕೆ ಬಂದು 34 ವರ್ಷ ತುಂಬಿದ ದಿನದಂದೇ ಈ ಚಿತ್ರ ಸೆಟ್ಟೇರಿರೋದು ವಿಶೇಷ.

ಈ ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿ ಯಾರು ನಟಿಸ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಿತ್ರಕ್ಕೆ ಸೌತ್‌ ಸ್ಟಾರ್‌ ಪ್ರಿಯಾ ಆನಂದ್‌ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ.

ಶಿವಣ್ಣನ ಜೊತೆ ಮೊದಲ ಬಾರಿಗೆ ಅಭಿನಯಿಸುತ್ತಿರುವ ಪ್ರಿಯಾ ಆನಂದ್‌, ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಎಕ್ಸೈಟ್‌ ಆಗಿದ್ದಾರೆ. ಆರ್‌ಡಿಎಕ್ಸ್‌ ಪ್ರಿಯಾ ಆನಂದ್‌ ನಟಿಸುತ್ತಿರುವ ಕನ್ನಡದ ಮೂರನೇ ಚಿತ್ರ.