ನಾಳಿನ ಜಂಬೂ ಸವಾರಿಗೆ ಸಿದ್ಧತೆ: ಪರಿಶೀಲಿಸಿದ ಸಚಿವ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ…

ಮೈಸೂರು,ಅ,7,2019(www.justkannada.in): ನಾಳೆ ನಡೆಯುವ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಇಂದು  ಸಕಲ ಸಿದ್ಧತೆ ನಡೆಯುತ್ತಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದಸ ಪ್ರತಾಪ್ ಸಿಂಹ ಸಿದ್ದತೆ ಪರಿಶೀಲನೆ ಮಾಡಿದರು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಳೆ ನಡೆಯಲಿರುವ ವಿಜಯದಶಮಿಯ ಬಂಬೂಸವಾರಿಗೆ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಈ ನಡುವೆ ಅರಮನೆಯ ಆವರಣದ ಪೂರ್ವ ಸಿದ್ಧತೆಯನ್ನ ಸಚಿವ ವಿ. ಸೋಮಣ್ಣ  ಹಾಗೂ ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು.

ಈ  ವೇಳೆ ಮಾತನಾಡಿದ ಸಚಿವ ವಿ .ಸೋಮಣ್ಣ್ಣ, ನಾಳೆ ಎಲ್ಲ ಕಾರ್ಯವು  ಸುಸೂತ್ರವಾಗಿ ನಡೆಯಲಿದೆ, ಯಾವುದೇ ಅಡೆತಡೆಗಳಿಲ್ಲದೆ ದೇವಿಯ ಆಶೀರ್ವಾದದಿಂದ  ಎಲ್ಲಾ ಕಾರ್ಯವು ಸಮೃದ್ಧಿಯಾಗಿ ನಡೆಯಲಿದೆ. ನಿಶ್ಚಿಂತೆಯಿಂದ ಬನ್ನಿ  ತಾಯಿ  ಚಾಮುಂಡೇಶ್ವರಿ  ಆಶೀರ್ವಾದ  ಪಡೆಯಿರಿ ಎಂದು ಸಾರ್ವಜನಿಕರಿಗೆ  ಕಿವಿಮಾತು ಹೇಳಿದರು.

ನಾಳಿನ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಗೆ  ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆಗೆ ಪಾಲ್ಗೊಳ್ಳುವ  ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜಮಾತೆ ಅವರೊಂದಿಗೆ ಮಾತನಾಡಿದ್ದೇವೆ  ಇಂದು ಸಂಜೆಯೂ  ಭೇಟಿ ಮಾಡಿ ಮಾತನಾಡುತ್ತೇವೆ. ಪುಷ್ಪಾರ್ಚನೆಗೆ ಯದುವೀರ್ ಭಾಗಿಯಾಗಲಿದ್ದಾರೆ  ಎಂದು ಸಚಿವ ಸೋಮಣ್ಣ ತಿಳಿಸಿದರು.

ನನಗೆ ದಸರಾ ಕಾರ್ಯಕ್ರಮಗಳ ಬಗ್ಗೆ ತೃಪ್ತಿ ಇದೆ- ಸಂಸದ ಪ್ರತಾಪ್ ಸಿಂಹ….

ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಮಗೆ ಸಿಕ್ಕ ಸಣ್ಣ ಸಮಯದಲ್ಲಿ ನಾವು ಉತ್ತಮವಾದ ಕೆಲಸಗಳನ್ನು ಮಾಡಿದ್ದೇವೆ. ನಿರೀಕ್ಷೆಗೂ ಮೀರುದ ಕಾರ್ಯಗಳನ್ನು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಾಡಿದ್ದೇವೆ. ಕೇವಲ ಒಂದು ತಿಂಗಳ ಅಂತರದಲ್ಲಿ ಈರೀತಿ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಆ ರೀತಿಯ ಕಾರ್ಯಗಳು ಈಗ ನಡೆದಿದೆ‌. ನನಗೆ ದಸರಾ ಕಾರ್ಯಕ್ರಮಗಳ ಬಗ್ಗೆ ತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಷ್ಟು ದಿನ ಎಲ್ಲರೂ ವಿದ್ಯುತ್ ದೀಪಾಲಂಕಾರದ ಬಗ್ಗೆ ಮಾತುಗಳನ್ನು ಹೇಳುತ್ತಿದ್ದರು. ಆದ್ರೇ ನಾಳೆ ನಡೆಯುವ ಜಂಬೂ ಸವಾರಿಯ ಬಗ್ಗೆ ಮಾತನಾಡುತ್ತಾರೆ. ಆ ರೀತಿಯ ಈ ಬಾರಿಯ ಜಂಬೂ ಸವಾರಿ ನಡೆಯಲಿದೆ. ಈ ಬಾರಿಯ ಸ್ತಬ್ಧ ಚಿತ್ರಗಳು ಸಹ ಮೊದಲಿಗಿಂತ ಭಿನ್ನವಾಗಿ ಮೂಡಿಬರಲಿದೆ. ಈ ಹಿಂದೆ ಇದ್ದ ಹಳೇ ರೀತಿಯ ಒಂದೇ ಸ್ತಬ್ಧ ಚಿತ್ರಗಳು ಇನ್ನು ಮುಂದೆ ಕಾಣುವುದಿಲ್ಲ ಎಂದು ಹೇಳಿದರು.

ನಾಳೆ ಮಧ್ಯಾಹ್ನ 2.15 ರ ನಂತರ ಮೆರವಣಿಗೆ ಪ್ರಾರಂಭವಾಗಲಿದೆ. ನನಗೆ ದಸರಾ ಕಾರ್ಯಕ್ರಮಗಳ ಬಗ್ಗೆ ತೃಪ್ತಿ ಇದೆ. ಆದ್ರೇ ತೃಪ್ತಿ ಇಷ್ಟಕ್ಕೆ ಮಾತ್ರ ಇರಬಾರದು. ಮುಂದಿನ ಬಾರಿ ಅದು ಇನ್ನಷ್ಟು ಹೆಚ್ಚಾಗುವಂತೆ ಮಾಡಬೇಕು. ಆಗ ನಾವು ಮಾಡಿದ ಕೆಲಸಕ್ಕೆ ಗೌರವ ಕೊಟ್ಟಂತೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

Key words: Preparing –dasara -jumbo ride- minister -V. Somanna –mp- Pratap Simha