ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ….

ಮೈಸೂರು,ಮಾರ್ಚ್,20,2021(www.justkannada.in): ಸಿ.ಸಿ.ಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.jk

ಇರ್ಫಾನ್ ಪಾಷ (27), ರಿಯಾಜ್ ಪಾಷ (23)  ಬಂಧಿತ ಆರೋಪಿಗಳು. ಬಂಧಿತರಿಂದ 5 ಕೆಜಿ 570 ಗ್ರಾಂ ಗಾಂಜಾ ಹಾಗೂ ಮಾರಾಟ ಮಾಡಿ ಸಂಪಾದನೆ ಮಾಡಿದ್ದ 4200 ರೂಪಾಯಿ ನಗದು ಹಾಗೂ 1 ಫೋನ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಕಾರ್ಯಾಚರಣೆಗೆ ಮೇಟಗಳ್ಳಿ ಪೊಲೀಸರ ಸಾಥ್ ನೀಡಿದ್ದರು.arrest-two-accused-selling-marijuana-mysore

ಡಿ.ಸಿ.ಪಿ ಪ್ರಕಾಶ್ ಗೌಡ,  ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಎ.ಸಿ.ಪಿ ಅಶ್ವಥ್ ನಾರಾಯಣ್, ಉಸ್ತುವಾರಿಯಲ್ಲಿ ಸಿಸಿಬಿಯ ಇನ್ಸ್ ಪೆಕ್ಟರ್ ವಿವೇಕಾನಂದ್, ಮೇಟಗಳ್ಳಿ ಇನ್ಸ್ ಪೆಕ್ಟರ್ ಮಲ್ಲೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Key words: Arrest – two -accused –selling- marijuana-mysore