ಮೈಸೂರಿನಲ್ಲಿ ಶ್ರೀಗಂಧದ ಮರ ಕಳ್ಳತನಕ್ಕೆ ಖದೀಮರ ಸಿದ್ಧತೆ: ಕಳ್ಳರ ಪಾಲಾಗುವ ಮುನ್ನ ಪೊಲೀಸರು, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ…

Promotion

ಮೈಸೂರು,ನ,29,2019(www.justkannada.in): ಮೈಸೂರಿನ ಕುವೆಂಪು ನಗರದ ವಿವೇಕಾನಂದ ವೃತ್ತದ ಬಳಿ  ಶ್ರೀ ಪಾದ ಶಿಲೆ ಉದ್ಯಾನದ ಬಳಿ ಇರುವ ಬೃಹತ್ ಶ್ರೀಗಂಧದ ಮರವೊಂದು ಇಂದು ಕಳ್ಳರ ಪಾಲಾಗಲಿದೆ.

ಶ್ರೀಗಂಧದ ಮರವನ್ನು ಕತ್ತರಿಸಿ ಹೊತ್ತೊಯ್ಯಲು ಅನುಕೂಲವಾಗುವಂತೆ ಕಳ್ಳರು ಗರಗಸದಿಂದ ಕುಯ್ದು ಸಿದ್ಧಪಡಿಸಿದ್ದಾರೆ. ಹೀಗಾಗಿ ಈ ಶ್ರೀಗಂಧದ ಮರ ಚೋರರ ಪಾಲಾಗುವ ಮುನ್ನ ಕುವೆಂಪು ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯು ಎಚ್ಚೆತ್ತು ಈ ಶ್ರೀಗಂಧದ ಮರವನ್ನು ಕಾಪಾಡಬೇಕಾಗಿದೆ.

ಅಥವಾ ಅರಣ್ಯ ಇಲಾಖೆಯವರೇ ಈ ಶ್ರೀಗಂಧದ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿ ಕಳ್ಳತನಕ್ಕೆ ಬ್ರೇಕ್ ಹಾಕಲಿ ಎಂಬ ಆಗ್ರಹ ಕೇಳಿ ಬಂದಿದೆ.

 

ಕೃಪೆ

-ಪಿ.ಜೆ.ರಾಘವೇಂದ್ರ.

ನ್ಯಾಯವಾದಿ, ಮೈಸೂರು.

key words: preparation -sandalwood tree-theft – Mysore