ಪ್ರತಾಪ್ ಸಿಂಹ ಏನು ಸಚಿವರಾ? ಹೆದ್ದಾರಿ ಪೂರ್ತಿ ಅವರ ಕ್ಷೇತ್ರದಲ್ಲಿ ಬರುತ್ತಾ..? ಮಾಜಿಸಿಎಂ ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು,ಮಾರ್ಚ್,9,2023(www.justkannada.in): ರಾಜ್ಯ  ವಿಧಾನಸಭೆ ಚುನಾವಣೆ  ಸಮೀಪಿಸುತ್ತಿದ್ದು,  ಬೆಂಗಳೂರು-ಮೈಸೂರು ವಿಚಾರದ ಕ್ರೆಡಿಟ್ ವಾರ್ ಮುಂದುವರಿದಿದೆ. ಈ ಮಧ್ಯೆ ಸಂಸದ ಪ್ರತಾಪ್ ಸಿಂಹ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತೆಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ,  ಪ್ರತಾಪ್ ಸಿಂಹ ಏನು ಸಚಿವರಾ? ಅವರು ಒಬ್ಬ ಸಂಸದ ಅಷ್ಟೇ. ಈ ಹೆದ್ದಾರಿ ಪೂರ್ತಿ ಪ್ರತಾಪ್​ ಸಿಂಹ ಕ್ಷೇತ್ರದಲ್ಲಿ ಬರುತ್ತಾ? ಕಳಸವಾಡಿವರೆಗೆ ಮಾತ್ರ ಪ್ರತಾಪ್ ಸಿಂಹ ಕ್ಷೇತ್ರ ಬರುತ್ತದೆ. ಅಷ್ಟೇ. ಮಂಡ್ಯ, ರಾಮನಗರ ಜಿಲ್ಲೆಯಲ್ಲೂ ಹೆದ್ದಾರಿ ಹಾದುಹೋಗುತ್ತದೆ ಎಂದು ಟಾಂಗ್ ನೀಡಿದರು.

ಹಾಗೆಯೇ  ಮೈಸೂರು- ಬೆಂಗಳೂರು ಹೆದ್ದಾರಿ ವೀಕ್ಷಿಸಲು ಹೋಗುತ್ತಿಲ್ಲ. ಮಾಜಿ ಸಚಿವ ಹೆಚ್​.ಸಿ.ಮಹದೇವಪ್ಪ ವೀಕ್ಷಣೆ ಮಾಡುತ್ತಾರೆ ಎಂದರು.

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಮಾಡಿದವರು ನಾವು. ಹೀಗಾಗಿ, ಅದರ ಕ್ರೆಡಿಟ್‌ ನಮ್ಮ ಸರ್ಕಾರಕ್ಕೆ ಸಲ್ಲಬೇಕು ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಯೋಜನೆಯಲ್ಲಿ ಸಂಸದ ಪ್ರತಾಪ್ ಸಿಂಹನದ್ದಾಗಲೀ ಬಿಜೆಪಿಯದ್ದಾಗಲೀ ಯಾವುದೇ ಪಾತ್ರವಿಲ್ಲ. ಸುಮ್ಮನೇ ಅವರೇ ಮಾಡಿಸಿದ್ದು ಎಂದುಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದ್ದರು.

Key words: Pratap Simha- minister- mysore-bangalore-highway-Former CM-Siddaramaiah