ಶಾಸಕ ಜಮೀರ್ ಅಹ್ಮದ್ ವಿದೇಶಿ ಪ್ರವಾಸದ ಬಗ್ಗೆ ತನಿಖೆಗೆ ಮನವಿ ಮಾಡಿದ ಪ್ರಶಾಂತ್ ಸಂಬರಗಿ: ಈ ಕುರಿತು ಸರ್ಕಾರಿ ಅಧೀನ ಕಾರ್ಯದರ್ಶಿಯಿಂದ ಸ್ಪಷ್ಟನೆ…

Promotion

 

ಬೆಂಗಳೂರು,ಸೆಪ್ಟಂಬರ್,22,2020(www.justkannada.in): ಚಾಮರಾಜಪೇಟೆಯ ಹಾಲಿ ಶಾಸಕ ಮತ್ತು ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕಳೆದ ಐದು ವರ್ಷಗಳಲ್ಲಿ ಹಲವು ವಿದೇಶಿ ಪ್ರವಾಸಗಳನ್ನ ಮಾಡಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ವಿದೇಶ ಪ್ರವಾಸಕ್ಕೂ ಜಮೀರ್ ಅಹಮದ್ ಖಾನ್ ಅನುಮತಿಯನ್ನು ಪಡೆದುಕೊಂಡಿಲ್ಲ ಹೀಗಾಗಿ ತನಿಖೆ ನಡೆಸುವಂತೆ ಸಿಎಂಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಪ್ರಶಾಂತ್ ಸಂಬರಗಿ, ಪ್ರಶಾಂತ್ ಸಂಬರಗಿ ಆದ ನಾನು, ಒಬ್ಬ ಉದ್ಯಮಿಯಾಗಿ ಮತ್ತು ಜವಾಬ್ದಾರಿಯುತ ನಾಗರೀಕನಾಗಿ ಹಲವು ವರ್ಷಗಳಿಂದ ಸಮಾಜ ಸೇವೆ ಮತ್ತು ಸಾರ್ವಜನಿಕ ಜೀವನದಲ್ಲಿದ್ದೇನೆ. ಇತ್ತೀಚೆಗೆ ಡ್ರಗ್ಸ್ ದಂಧೆಗೂ ಕನ್ನಡ ಚಿತ್ರರಂಗಕ್ಕೂ ಇರುವ ಲಿಂಕ್ ಅನ್ನು ಬಯಲಿಗೆಳೆದಿದ್ದೇನೆ.

ಜಮೀರ್ ಅಹಮದ್ ಖಾನ್ ಅವರು 2019ರ ಜೂನ್ 8 ರಿಂದ 10 ರ ವರೆಗೆ ವಿದೇಶ ಪ್ರವಾಸ ಮಾಡಿರುತ್ತಾರೆ. ಯಾಕೆ ಅವರು ಈ ಪ್ರವಾಸದ ವಿಚಾರವನ್ನ ಸಂಬಂಧಿತ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ ಅನ್ನೋದಕ್ಕೆ ಸ್ಪಷ್ಟತೆಯಿಲ್ಲ. ನಿಮಗೆ ಗೊತ್ತಿರಬಹುದು ಇತ್ತೀಚೆಗೆ ಜಮೀರ್ ಅಹಮದ್ ಅವರ ಹೆಸರು ಕನ್ನಡ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.prashanth-sambaragi-appeals-investigation-foreign-tours-mla-jameer

ಇತ್ತೀಚಿನ ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಯ ವರದಿಯೊಂದು ಬಹಿರಂಗಪಡಿಸಿರುವಂತೆ, ಚೀನಾ 10 ಸಾವಿರಕ್ಕೂ ಹೆಚ್ಚು ಭಾರತೀಯರ ಮೇಲೆ ಗೂಡಾಚಾರಿಕೆ ಮಾಡುತ್ತಿದೆ. ಇಂಥಾ ಸಂದರ್ಭದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಕಾನೂನು ಪಾಲನೆ ಮಾಡಬೇಕಾಗಿದ್ದ ಜಮೀರ್ ಅಹಮದ್ ಖಾನ್ ಅವರು ತಮ್ಮ ವಿದೇಶಿ ಪ್ರವಾಸಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಇದು ಅವರ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತುವಂತೆ ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ನಾಗರೀಕನಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಮೀರ್ ಅಹಮದ್ ಖಾನ್ ಅವರ ಅನುಮಾನಾಸ್ಪದ ನಡೆಯ ವಿರುದ್ಧ ತನಿಖೆ ಮಾಡಬೇಕೆಂದು ಮನವಿಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದರುprashanth-sambaragi-appeals-investigation-foreign-tours-mla-jameer.

ಈ ಸಂಬಂಧ ಪ್ರಶಾಂತ್ ಸಂಬರಗಿ ಅವರಿಗೆ ಪತ್ರದಲ್ಲಿ ಮಾಹಿತಿ ನೀಡಿರುವ  ಸರ್ಕಾರದ  ಅಧೀನಕಾರ್ಯದರ್ಶಿ-1, 2018ರಿಂದ 2020ರವರೆಗೆ ಶಾಸಕ ಜಮೀರ್ ಅಹ್ಮದ್ ಯಾವುದೇ ವಿದೇಶಿ ಪ್ರವಾಸದ ಕೈಗೊಂಡಿರುವ ಬಗ್ಗೆ  ಸಿ.ಆ.ಸು ಇಲಾಖೆ ವಿಭಾಗದಲ್ಲಿ  ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು ತಿಳಿಸಿದ್ದಾರೆ.

Key words: Prashanth Sambaragi -appeals – investigation – foreign tours- MLA jameer