Friday, August 28, 2026

BDA Apartments

Home Crime ಆಟವಾಡುವ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳು ಸಾವು…

ಆಟವಾಡುವ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳು ಸಾವು…

ಮೈಸೂರು,ಸೆಪ್ಟಂಬರ್,23,2020(www.justkannada.in): ಆಟವಾಡಲು ಹೋಗಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.jk-logo-justkannada-logo

ಅಂಕನಹಳ್ಳಿ ಗ್ರಾಮದ  ಪಟೇಲ್ ವೆಂಕಟೇಶ್  ಎಂಬುವವರಿಗೆ ಸೇರಿದ ಜಮೀನಿನಲ್ಲಿ ನಿನ್ನೆ ಸಂಜೆ ವೇಳೆ ಘಟನೆ ನಡೆದಿದೆ. ಕಾವೇರಿ(2), ರೋಹಿತ್ (2.6), ಸಂಜಯ್ (4) ಮೃತ ಮಕ್ಕಳು. ಮೃತ ಮಕ್ಕಳ ಕುಟುಂಬಸ್ಥರು ಕಬ್ಬು ಕಟಾವಿಗೆ ಬಳ್ಳಾರಿ ಜಿಲ್ಲೆಯಿಂದ ವಲಸೆ ಬಂದಿದ್ದರು.three-children-die-farm-pits-playing-mysore-t-narsipur

ಈ ನಡುವೆ  ನಿನ್ನೆ ಸಂಜೆ ಮೂವರು ಮಕ್ಕಳು ಆಟವಾಡಲು ಹೋಗಿ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿವೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಬನ್ನೂರು ಪೊಲೀಸ್ ಠಾಣೆ  ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಮಕ್ಕಳ ದೇಹವನ್ನು ಬನ್ನೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Three -children –die- farm pits- playing-mysore-T.Narsipur