Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಗೃಹಲಕ್ಷ್ಮೀ, ಗೃಹಜ್ಯೋತಿ ಪರಿಷ್ಕರಣೆ: ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ- ಸಿಎಂ ಡಿಕೆ ಶಿವಕುಮಾರ್

ಗೃಹಲಕ್ಷ್ಮೀ, ಗೃಹಜ್ಯೋತಿ ಪರಿಷ್ಕರಣೆ: ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ- ಸಿಎಂ ಡಿಕೆ ಶಿವಕುಮಾರ್

ಬೆಳಗಾವಿ,ಜುಲೈ,9,2026 (www.justkannada.in): ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಮೃತರ ಖಾತೆಗಳಿಗೂ ಹಣ ಹೋಗಿರುವ ಮಾಹಿತಿ ಬಂದಿದೆ. ಒಂದೊಂದು ಅಕೌಂಟಿಗೆ ಸಾಕಷ್ಟು ಹಣ ಹೋಗಿದೆ.  ಗೃಹಲಕ್ಷ್ಮೀ,  ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಮಾಡುತ್ತೇವೆ. ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಎಸ್ ಐಆರ್ ಕುರಿತು ಕೂಡ ಮಾರ್ಗದರ್ಶನ ಕೊಟ್ಟಿದ್ದೇವೆ. ನಾಲ್ಕುವರೆಗೆ ಕೋಟಿ ಜಾತಿ ಪ್ರಮಾಣ ಪತ್ರ ಆನ್ ಲೈನ್ ನಲ್ಲಿವೆ. ಅದನ್ನು ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಪ್ರತಿಯೊಂದು ಬೂತ್ ನಲ್ಲಿ ಹೆಲ್ಪ್ ಡೆಸ್ಕ್ ಮಾಡುತ್ತೇವೆ  ಎಂದರು.

ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆ ವಿಚಾರದಲ್ಲಿ ಒಪ್ಪಂದ ,  1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆ ಮಾಡಲು ಮುಂದಾಗಿದ್ದೇವೆ.  ಕೇಂದ್ರಕ್ಕೆ ಈ ಪ್ರಾಜೆಕ್ಟ್ ಮಾಡಲು ಕೇಳಿದ್ದೇವೆ. ಬರಗಾಲ ಇದೆ ಬಿತ್ತನೆ ಬೀಜ, ಗೊಬ್ಬರ ಇಡಲು ತಯಾರಿ. ನೀರಿನ ಸಮಸ್ಯೆ ಬಹಳ ಇದೆ. ಹೀಗಾಗಿ ಹೊಸ ತೀರ್ಮಾನ ಮಾಡಿದ್ದೇವೆ. ಸುವರ್ಣಸೌಧದಲ್ಲಿ ಹೊಸ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

Key words: Griha Lakshmi, Griha Jyoti, revision, CM, DK Shivakumar