ಸಿದ್ಧರಾಮಯ್ಯ ಯೋಜನೆಗಳ ಬಗ್ಗೆ ಪ್ರಶಂಸೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ.

ದಾವಣಗೆರೆ,ಆಗಸ್ಟ್,3,2022(www.justkannada.in): ಬಿಜೆಪಿ ಭ್ರಷ್ಟ ಸರ್ಕಾರದಿಂದ ರಾಜ್ಯದಲ್ಲಿ ಅಶಾಂತಿ ಮೂಡಿದೆ. ಕರ್ನಾಟಕ ಸಂಸ್ಕೃತಿ ಪರಂಪರೆ ಉಳಿಸಬೇಕಿದೆ. ಇದಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಸಿದ್ಧರಾಮಯ್ಯ-ಡಿಕೆ ಶಿವಕುಮಾರ್  ನಾಯಕತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬನ್ನಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದರು.

ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಬಳಿಕ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಿಷ್ಟು.

ಸಿದ್ಧರಾಮೋತ್ಸವದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಸಿದ್ಧರಾಮಯ್ಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಸಂತೋಷವಾಗಿದೆ.  ನಾನು ಇಲ್ಲಿಗೆ ಬರಲು ಕಾರಣ ಸಿದ್ಧರಾಮಯ್ಯ ನನಗೆ ವಿಶೇಷ ಸಂಬಂಧ ಇದೆ.  ಸಾಮಾನ್ಯವಾಗಿ ನಾನು ವಾಉವುದೇ ಬರ್ತಡೆಗೆ ಹೋಗಲ್ಲ. ಆದರೆ ಸಿದ್ಧರಾಮಯ್ಯರ ಬಗ್ಗೆ ವಿಶೇಷ ಅಭಿಮಾನವಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಸಿದ್ಧರಾಮಯ್ಯಗೆ ಕರ್ನಾಟಕದ ಅಭಿವೃದ್ದಿ ಬಗ್ಗೆ ಕಾಳಜಿ ಇದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಬಯಸುತ್ತಾರೆ. ಅನ್ನಭಾಗ್ಯ ಕೃಷಿ ಭಾಗ್ಯ ವಿದ್ಯಾಸಿರಿ ಯೋಜನೆ ಜನ ಮರೆತಿಲ್ಲ. ಇಂದರಾ ಕ್ಯಾಂಟಿನ್ ರೀತಿ ಯೋಜನೆ ನಡೆಸಲು ಕಾಂಗ್ರೆಸ್ ಬದ್ಧ.  ದುರ್ಬಲರು ಬಡವರ ಬಗ್ಗೆ ಸಿದ್ದರಾಮಯ್ಯ ಸ್ಪಂದನೆ ನನಗೆ ಅಚ್ಚುಮೆಚ್ಚು ಎಂದು ಪ್ರಶಂಸಿದರು.

ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ,  ಬಿಜೆಪಿಗೆ ಸಾಮಾಜಿಕ ನ್ಯಾಯದ ಕಾಳಜಿ ಇಲ್ಲ.  ಬಿಜೆಪಿ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದೆ. ಕರ್ನಾಟಕ ಸಂಸ್ಕೃತ ಪರಂಪರೆ ಉಳಿಸಬಬೇಕಿದೆ. ಇದಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದರು.

ಕೇಂದ್ರಸರ್ಕಾರ ದೊಡ್ಡ ಸಾಧನೆ ನೋಟ್ ಬ್ಯಾನ್ ಮಾಡಿದ್ದು. ಬಿಜೆಪಿ ಭ್ರಷ್ಟಸರ್ಕಾರದಿಂದ ರಾಜ್ಯದಲ್ಲಿ ಅಶಾಂತಿ ನೆಲೆಸಿದೆ ಇದು ಎಲ್ಲರಿಗೂ ಗೊತ್ತು.  ಅಮೇರಿಕಾ ನಾಗರಿಕರು ಕೂಡ ಕರ್ನಾಟಕದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಸರ್ವಧರ್ಮ ಸಾಮರಸ್ಯ ಇವತ್ತು ಕಾಣುತ್ತಿಲ್ಲ ಕಾಂಗ್ರೆಸ್ ಅಧಿಕಾರದಲ್ಲಿ ಶಾಂತಿ ಸಮನ್ವಯತೆ ಇತ್ತು.  ಕರ್ನಾಟಕದಲ್ಲಿ ಇವತ್ತಿನ ಹಿಂಸಾಚಾರ ಎಂದೂ ಅನುಭವಿಸಿಲ್ಲ.  ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚರವನ್ನ ಎಲ್ಲರೂ ನೋಡಬಹುದು ಎಂದು ಗುಡಗಿದರು.

ಪ್ರಾಮಾಣೀಕತೆ ಮೂಲತತ್ವದ ಬಗ್ಗೆ ಹೇಳಿದ್ದು ಬಸವಣ್ಣ. ಬಸವಣ್ಣನವರ ಮೂಲತತ್ವಕ್ಕೆ ಬಿಜೆಪಿ ವಿರೋಧವಾಗಿದೆ.  ವಸಹತು ಆಡಳಿತ ಮಾಡಲು ಬಿಜೆಪಿಯಿಂದ ಪ್ರಯತ್ನ ನಡೆಯುತ್ತಿದೆ. ಸಣ್ಣ ವ್ಯಾಪಾರಿಗಳು ಬಡ ರೈತರಿಗೆ ಜಿಎಸ್ ಟಿ ಬರೆ ಹಾಕಿದ್ದಾರೆ. ಜಿಎಸ್ ಟಿ ನೋಟ್ ಬ್ಯಾನ್ ಕ್ರಮಗಳು ರಾಷ್ಟ್ರಕ್ಕೆ ದುರಂತ.  ಕಾರ್ಮಿಕರು, ರೈತರು ಕೃಷಿಕರನ್ನ ನಾಶ ಮಾಡೋ ಯತ್ನ ಮಾಡುತ್ತಿದ್ದಾರೆ. ಜಿಎಸ್ ಟಿ ತಂದು ಬಡವರ ರಕ್ತ ಹೀರುತ್ತಿದ್ದಾರೆ. ಬಡವರ ಕೈಯಲ್ಲಿದ್ದ 10, 20 ರೂ ಕಸಿದಿದ್ದಾರೆ. ಮೂರು ಕೃಷಿ ಕಾಯ್ದೆಯನ್ನ ಜಾರಿ ಮಾಡಿ ರೈತರನ್ನ ಲೂಟಿ ಮಾಡುವ ಯತ್ನ ಮಾಡಿದ್ದರು ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

Key words: Praise – Siddaramaiah’s –schemes-Rahul Gandhi – central – state governments.