ಮುಸ್ಲೀಂ ವೋಟ್ ನಿಂದ ಅಧಿಕಾರ ಎನ್ನುವ ಕಾಲ ಹೋಗಿ ಬಹಳ ದಿನವಾಯ್ತು- ಶಾಸಕ ಜಮೀರ್ ಗೆ ಸಿ.ಟಿ ರವಿ ಟಾಂಗ್.

Promotion

ನವದೆಹಲಿ,ಜುಲೈ,25,2022(www.justkannada.in): ಮುಸ್ಲೀಂ ವೋಟ್ ನಿಂದ ಅಧಿಕಾರ ಎನ್ನುವ ಕಾಲವಿತ್ತು. ಆದರೆ ಆ ಕಾಲ ಹೋಗಿ ಬಹಳದಿನವಾಯ್ತು  ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಮುಸ್ಲೀಮರಿಂದ ಗೆಲ್ಲಬಹುದು ಎನ್ನುವ ಕಾಲ ಹೋಯ್ತು ಮುಸ್ಲೀಮರ ವೋಟ್ ನಿಂದ ಅಧಿಕಾರ ಎನ್ನುವ ಕಾಲವಿತ್ತು. ಆ ಕಾಲ ಹೋಗಿ ಬಹಳ ದಿನವಾಯ್ತು.ವೋಟ್ ಬ್ಯಾಂಕ್ ತೋರಿಸಿ ಹೆದುರಿಸುವ ಕಾಲವೂ ಹೋಯ್ತು.  ನೆನಪಟ್ಟುಕೊಳ್ಳಿ ಜಮೀರ್ ಬಾಯ್ ಎಂದು ಲೇವಡಿ ಮಾಡಿದರು.

ಇನ್ನು  ಒಕ್ಕಲಿಗರಿಗೆ ಸಿಎಂ ಅವಕಾಶ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಸಿ.ಟಿ ರವಿ,  ಕುಟುಂಬದ ಸಂಪತ್ತು ಹೆಚ್ಚು ಮಾಡಿಕೊಳ್ಳುವವರು ಬೇಡ. ಸೋಗಲಾಡಿ ಜಾತ್ಯಾತೀತರೂ ಬೇಡ.  ಜಾತಿಗೊಬ್ಬರು ಸಿಎಂ ಆಗಲು ಸಾಧ್ಯವಿಲ್ಲ .  ನಾವು ಸಮಗ್ರ ಕರ್ನಾಟಕದ ಸಿಎಂ ಆಗಬೇಕು ಎನ್ನುವವರು. ಕಾಂಗ್ರೆಸ್ಸಿಗರಿಗೆ  ಜಾತಿ ಅನಕೂಲಕ್ಕೆ ಮಾತ್ರ.  ಜಾತಿ ರಾಜಕಾರಣ ಇರಬಾರದು.  ಕಾಂಗ್ರೆಸ್ಸಿಗರದ್ದು ನಖಲಿ ಜಾತ್ಯಾತೀತವಾದ ಎಂದು ಕಿಡಿಕಾರಿದರು.

Key words: power – Muslim –vote-bjp-CT Ravi – MLA -Zameer.