ಕಾಲೇಜಿಗೆ ತೆರಳಿದ್ದ ನಾಲ್ವರು ವಿದ್ಯಾರ್ಥಿನೀಯರು ಒಂದೇ ದಿನ ನಾಪತ್ತೆ.

ರಾಯಚೂರು,ಜುಲೈ,25,2022(www.justkannada.in):  ಕಾಲೇಜಿಗೆ ತೆರಳುವುದಾಗಿ ಹೇಳಿ ಹೋಗಿದ್ದ ನಾಲ್ವರು ವಿದ್ಯಾರ್ಥಿನೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.  ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದೇ ದಿನ ನಾಲ್ವರು ವಿದ್ಯಾರ್ಥಿನೀಯರು ನಾಪತ್ತೆಯಾಗಿದ್ದಾರೆ.  ಮೂವರು ದ್ವಿತೀಯ ಪಿಯುಸಿ ಓರ್ವ ವಿದ್ಯಾರ್ಥಿನಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಜುಲೈ23ರಂದು ನಾತ್ತೆಯಾಗಿರುವ ವಿದ್ಯಾರ್ಥಿನೀಯರಿಗಾಗಿ  2 ದಿನದಿಂದ ಹುಡುಕಾಟ ನಡೆಸಲಾಗುತ್ತಿದೆ. ಶನಿವಾರ ಕಾಲೇಜಿಗೆ ಆಗಮಿಸಿದ್ದು, ಮರಳಿ ಮನೆಗೆ ಹೋಗಿಲ್ಲ.ಘಟನೆಯಿಂದ ಪಾಲಕರು ಆತಂಕಗೊಂಡಿದ್ದು, ಕಾಲೇಜಿನಲ್ಲೂ ಬಿಗುವಿನ ವಾತಾವರಣವಿದೆ.

Key words: Four- college- students-missing-raichur