ಸಲ್ಮಾನ್‌ ಖಾನ್‌’ಗೆ ಜೋಡಿಯಾಗೋ ಚಾನ್ಸ್ ಪಡೆದ ಪೂಜಾ ಹೆಗ್ಡೆ

Promotion

ಬೆಂಗಳೂರು, ಫೆಬ್ರವರಿ 14, 2020 (www.justkannada.in): ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ನಟನೆಯ ಕಭಿ ಈದ್‌ ಕಭಿ ದಿವಾಲಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪೂಜಾ ಈಗ ಸಲ್ಮಾನ್ ಖಾನ್ ಗೆ ಹೀರೋಯಿನ್ ಆಗಿ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಈ ಸಂಗತಿಯನ್ನು ನದಿಯಾಡ್ ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ (ಎನ್‍ಜಿಇ) ಸಂಸ್ಥೆ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದೆ.

ಎನ್‍ಜಿಇ ಕುಟುಂಬಕ್ಕೆ ಪೂಜಾ ಹೆಗ್ಡೆ ಅವರನ್ನು ಸ್ವಾಗತಿಸುತ್ತಿದ್ದೇವೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ಪೂಜಾ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾರೆ ಎಂದು ಎನ್‌ಜಿಇಎಫ್ ಟ್ವೀಟ್ ಮಾಡಿದೆ.

ಪೂಜಾ ನಟಿಸಿರುವ ಹೌಸ್‌ಫುಲ್ 4 ನಿರ್ದೇಶಿಸಿರುವ ಫರ್ಹಾದ್ ಸಾಮ್ಜಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಜಿದ್ ನದಿಯಾಡ್ ವಾಲಾ ಅವರ ಕಥೆ ಚಿತ್ರಕ್ಕಿದೆ. 2021ರ ಈದ್ ಹಬ್ಬಕ್ಕೆ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.