ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಮರೆತು ಜಯಚಂದ್ರ ಗೆಲುವಿಗೆ ಶ್ರಮಿಸುವೆ : ಶಾಸಕ ಕೆ.ಎನ್.ರಾಜಣ್ಣ

ಮೈಸೂರು,ಸೆಪ್ಟೆಂಬರ್,20,2020(www.justkannada.in) : ನನ್ನ ಮತ್ತು ಜಯಚಂದ್ರ ನಡುವೆ ಕೆಲವು ಅಸಮಾಧಾನ ಇತ್ತು. ಆದರೆ, ಪಕ್ಷದ ರಾಜ್ಯ ಮುಖಂಡರು ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಗೊಂದಲಗಳು ಬಗೆಹರಿದಿವೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಮರೆತು ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಭರವಸೆ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.jk-logo-justkannada-logoಶಿರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಚಂದ್ರ ಹೆಸರು ಘೋಷಣೆಯಾದ ಬಳಿಕ,  ಮೊದಲ ಬಾರಿಗೆ ತುಮಕೂರಿನಲ್ಲಿ ಕೆ.ಎನ್‌.ರಾಜಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಈ ಸಂದರ್ಭ ಕೆ.ಎನ್.ರಾಜಣ್ಣ ಮಾತನಾಡಿ, ಹೈಕಮಾಂಡ್ ನಾಯಕರು ನಮ್ಮ ನಡುವಿನ ಗೊಂದಲಗಳನ್ನು ನಿವಾರಿಸಿರುವುದರಿಂದ ಸ್ವಾಭಿಮಾನದ ಪ್ರಶ್ನೆ ಉದ್ಭವಿಸುವುದಿಲ್ಲ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮುಖ್ಯ. ನಾವು ಜೋಡೆತ್ತುಗಳು, ಒಂದೇ ಬಣ್ಣ ಒಂದೇ ರೀತಿಯ ಕೊಂಬುಗಳು ಇವೆ. ಹಾಗಾಗಿ ನಮ್ಮ ನಡುವೆ ವ್ಯತ್ಯಾಸ ಬರುವುದಿಲ್ಲ. ಮಂಡ್ಯ ಎತ್ತುಗಳು ಒಂದು ಕರಿಯ ಬಣ್ಣದ್ದು, ಮತ್ತೊಂದು ಬಿಳಿಯ ಬಣ್ಣದ್ದು. ಹಾಗಾಗಿ ಅಲ್ಲಿ ವ್ಯತ್ಯಾಸ ಬರುತ್ತದೆ. ಜಿಲ್ಲೆಯಲ್ಲಿ ಅಂತಹ ವ್ಯತ್ಯಾಸ ಬರುವುದಿಲ್ಲ ಎಂದರು.party's-sake-forget-everything-strive-victory-MLA K.N.Rajanna

ಡಾ.ಜಿ.ಪರಮೇಶ್ವರ್ ಮತ್ತು ನನ್ನ ನಡುವೆ ಭಿನ್ನಾಬಿಪ್ರಾಯಗಳು ಇವೆ. ಅಸಮಾಧಾನವೂ ಇತ್ತು. ಇಂತಹ ಅಸಮಾಧಾನ, ಗೊಂದಲ ರಾಜಕಾರಣದಲ್ಲಿ ಸಹಜ. ಅವು ಬರುತ್ತವೆ ಹೋಗುತ್ತವೆ. ಪಕ್ಷ, ಜನರ ಹಿತದೃಷ್ಟಿ ಮತ್ತು ಮುಂದಿನ ಬೆಳವಣಿಗೆಗಳ ಹಿತದೃಷ್ಟಿಯಿಂದ ಒಂದಾಗಿ ಹೋಗಬೇಕೆಂದು ನಮ್ಮ ನಾಯಕರು ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ ವಿರೋಧಿ ಅಲೆ ಎದ್ದಿದೆ

ರಾಜ್ಯದಲ್ಲಿ ಬಿಜೆಪಿಯ ವಿರೋಧಿ ಅಲೆ ಎದ್ದಿದೆ. ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಪ್ರಧಾನಿ ಮೋದಿ ಆಡಳಿತ ವಿರುದ್ಧ ಜನರ ತಿರುಗಿಬಿದ್ದಿದ್ದಾರೆ. ಮೋದಿ ಅಲೆ ಕೆಲಸ ಮಾಡುವುದಿಲ್ಲ. ಇತ್ತೀಚೆಗೆ ಮೋದಿ ವಿಡಿಯೋಗಳಿಗೆ ಜನ ಡಿಸ್ ಲೈಕ್ ಒತ್ತಿರುವುದು ಕಂಡುಬಂದಿದೆ. ಅಂದರೆ ಜನ, ಮೋದಿ ಅವರ ಆಡಳಿತವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ, ಶಿರಾದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಆಡಳಿತ ಪಕ್ಷ ಇದ್ದಾಗ ಶೇ.10ರಷ್ಟು ಮತಗಳು ಸರ್ಕಾರದ ಪರವಾಗಿ ಬೀಳುತ್ತವೆ. ಮೂರನೇ ಸ್ಥಾನ ಪಡೆಯಲಿದೆ ಎಂದು ಕೆ.ಎನ್‌.ರಾಜಣ್ಣ ತಿಳಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜನರು ಮತ್ತು ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಪರಮೇಶ್ವರ್, ಷಡಕ್ಷರಿ, ಕೆ.ಎನ್.ರಾಜಣ್ಣ ಮತ್ತು ನಮೆಗೆಲ್ಲ ವಯಸ್ಸಾಯಿತು. ಪಕ್ಷದ ಬೆಳವಣಿಗೆ ದೃಷ್ಟಿ ಮತ್ತು ಹೊಸ ನಾಯಕತ್ವದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗಬೇಕು. ಇದು ಅನಿವಾರ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಲ ರಾಜಣ್ಣ, ಪುತ್ರ ಆರ್. ರಾಜೇಂದ್ರ ಇತರರು ಉಪಸ್ಥಿತರಿದ್ದರು.

key words : party’s-sake-forget-everything-strive-victory-MLA K.N.Rajanna