ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಕೆಎಸ್ ಒಯುನಲ್ಲಿ ಆನ್ ಲೈನ್ ತರಬೇತಿ ಶಿಬಿರ ಆಯೋಜನೆ…

ಮೈಸೂರು,ಸೆಪ್ಟಂಬರ್,4,2020(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು  ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನಗಳ ಆನ್ ಲೈನ್ ತರಬೇತಿ ಶಿಬಿರವನ್ನು ಆಯೋಜಿಸಿದೆ.jk-logo-justkannada-logo

ನಾಳೆ ಬೆಳಿಗ್ಗೆ 11 ಗಂಟೆಗೆ ಕುಲಪತಿಗಳ ಸಭಾಂಗಣದಲ್ಲಿ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ  ಆನ್ ಲೈನ್ ತರಬೇತಿ ಶಿಬಿರವನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆನ್ ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಶೇಷ ಭೂಸ್ವಾಧೀನಾಧಿಕಾರಿ ಎ.ದೇವರಾಜು ಹಾಗೂ ಎಂಡಿ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಕರ್ನಾಟಕ ಸರ್ಕಾರ, ಸಿಇಒ ಆಶಾದ್ ಆರ್ ಷರೀಫ್ ಆಗಮಿಸಲಿದ್ದಾರೆ.

online-training-camp-banking-vacancy-recruitment-exams-mysore-ksou

ಕುಲಪತಿ ವಿದ್ಯಾಶಂಕರ್ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ  ಲಿಂಗರಾಜ ಗಾಂಧಿ ಉಪಸ್ಥಿತರಿರಲಿದ್ದಾರೆ. * 50 ದಿನಗಳು ತರಗತಿಗಳು ನಡೆಯಲಿದ್ದು, ಈ ತರಬೇತಿಗೆ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 300 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

Key words: Online –training- camp – banking vacancy -recruitment -exams –mysore- KSOU.