ಎನ್.ಟಿ.ಎಂ.ಎಸ್ ಶಾಲೆ v/s ವಿವೇಕ ಸ್ಮಾರಕ: ಮುಂದುವರಿದ ಪ್ರತಿಭಟನೆ, ಶಾಸಕ ಎನ್.ಮಹೇಶ್ ಸಾಥ್

ಮೈಸೂರು , ಜುಲೈ 11, 2021 (www.justkannada.in): ಎನ್.ಟಿ.ಎಂ.ಎಸ್ ಶಾಲೆ v/s ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ಮುಂದುವರಿದಿದೆ.

ಪ್ರತಿಭಟನೆಗೆ ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಎನ್.ಟಿ.ಎಂ.ಎಸ್ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿ ಶಾಲೆ ಉಳಿವಿಗೆ ಒತ್ತಾಯಿಸಿದರು.

ಶಾಲೆ ಕೆಡವಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಮಹಾರಾಣಿ ಮಾದರಿ ಶಾಲೆ ಉಳಿಸಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ತಾಯಿ ಈ ಶಾಲೆಯನ್ನ ನಿರ್ಮಾಣ ಮಾಡಿದ್ದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಮೈಸೂರು ಸಂಸ್ಥಾನ ಆದ್ಯತೆ ನೀಡಿತ್ತು. ಇಂತಹ ಐತಿಹಾಸಿಕ ಶಾಲೆಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ನಾನು ವ್ಯಯಕ್ತಿಕವಾಗಿ ಸ್ವಾಮಿ ವಿವೇಕಾನಂದರ ಅಭಿಮಾನಿ. ಸ್ವಾಮಿ ವಿವೇಕಾನಂದರ ಹೆಸರಲ್ಲಿ  ಈ ವಿಚಾರವನ್ನ ಕಾಂಟ್ರವರ್ಸಿ ಮಾಡೊದು ಸರಿಯಲ್ಲ. ಶಾಲೆ ಕೆಡವೋದು ವಿವೇಕಾನಂದರ ಆಶಯದ ವಿರುದ್ಧದ ನಿಲುವು. ಹಾಗಾಗಿ ಶತಮಾನದ ಈ ಶಾಲೆ ಉಳಿಯಬೇಕು. ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ ಶಾಸಕ ಎನ್.ಮಹೇಶ್ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಾಹಿತಿ ಪ್ರೊ.ಭಗವಾನ್, ಇತಿಹಾಸ ತಜ್ಞ ನಂಜರಾಜೇ ಅರಸ್, ಹೋರಾಟಗಾರ ಪ.ಮಲ್ಲೇಶ್, ಮಾಜಿ ಮೇಯರ್ ಪುರುಷೋತ್ತಮ್ ಭಾಗಿಯಾಗಿದ್ದಾರೆ.