ಬೆಳೆಹಾನಿಯಾಗಿ ತಿಂಗಳಾದ್ರೂ ಸರ್ವೆ ಮಾಡಿಲ್ಲ: ಇದು ರೈತ ವಿರೋಧಿ ಸರ್ಕಾರವೆಂದು ಸಿದ್ಧರಾಮಯ್ಯ ಟೀಕೆ.

ಶಿವಮೊಗ್ಗ,ಡಿಸೆಂಬರ್,4,2021(www.justkannada.in):  ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಬೆಳೆಹಾನಿಯಾಗಿ ಒಂದು ತಿಂಗಳಾದರೂ ಸರ್ವೆ ಮಾಡಿಲ್ಲ. ರಾಜ್ಯದಲ್ಲಿರುವುದು ರೈತವಿರೋಧಿ ಸರ್ಕಾರ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಭಾರಿ ಮಳೆಯಿಂದ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿ. ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಬೆಳೆಹಾನಿಯಾಗಿ ತಿಂಗಳು ಕಳೆದರೂ ಸರ್ಕಾರ ಸರ್ವೇ  ಮಾಡಿಸಿಲ್ಲ. ಇದು ರೈತವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: Not- surveyed –monthly-anti-peasant- government- former CM-Siddaramaiah

ENGLISH SUMMARY….

This is anti-farmer government: Not done any development work – Siddaramaiah
Shivamogga, December 4, 2021 (www.justkannada.in): Leader of Opposition in the Legislative Assembly and former Chief Minister Siddaramaiah today criticized the State Government for not surveying to assess the damage caused due to the heavy rains in the State even after one month. “The State Government is anti-farmer,” he alleged.
Speaking to the press persons at Shivamogga today, Siddaramaiah said, “There has been a huge crop loss due to the heavy rains in the State. Crop grown in about 5 lakh hectares is destroyed. The State Government has not bothered to conduct a survey even after one month after the incident. It shows that it is anti-farmer,” he criticized.
“The BJP government is not doing any development work. That is why people are cursing this government,” he added.
Keywords: Former CM Siddaramaiah/Shivamogga/ State Government/ anti-farmer