ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮೈಸೂರು ವಿವಿ ಬ್ಯಾಡ್ಮಿಂಟನ್ ತಂಡ ಆಯ್ಕೆ

ಮೈಸೂರು: ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡವನ್ನು ಆಯ್ಕೆ ಮಾಡಲಾಗಿದೆ.

2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಯು ಡಿ.6 ರಿಂದ 10ರ ವರೆಗೆ ಆಂಧ್ರಪ್ರದೇಶದ ಗುಂಟೂರು ಕೆಎಲ್‌ಇಎಫ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು,  ಸದರಿ ಪಂದ್ಯಾವಳಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡದ ಆಟಗಾರರು ಭಾಗವಹಿಸಲಿದ್ದಾರೆ.

ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ನಡೆದ  ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆ ನಡೆದ್ದು,  ಶಿವಪ್ರಸಾದ್(ನಾಯಕ), ಪಿ.ವಿ.ವಿಶಾಲ್, ಪಿ.ಎಲ್.ಮೊಹಮದ್ ಹರ್ಷದ್, ವಿ.ಸಚಿನ್, ಧೃವ ಟಿ.ವಡಿಕಲ್, ಆರ್.ಸಂತೋಷ್, ಎಚ್.ಆರ್.ಸೋಹನ್ ತಮ್ಮ ಉತ್ತಮವಾಗಿ ಬ್ಯಾಡ್ಮಿಂಟನ್ ಆಡುವುದರ ಜತೆಗೆ ತಮ್ಮ ದೈಹಿಕ ಸಾಮರ್ಥ್ಯವನ್ನು ಸಾಧರ ಪಡಿಸಿ ಮೈಸೂರು ವಿವಿ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತರಬೇತುದಾರ ಆರ್.ರಮೇಶ್, ತಂಡದ ವ್ಯವಸ್ಥಾಪಕ ಜಯಂಶಂಕರ್ ಜತೆ ತಮ್ಮ ತಂಡ ಪ್ರಯಾಣ ಕೆಎಲ್‌ಇಎಫ್ ವಿಶ್ವವಿದ್ಯಾಲಯಕ್ಕೆ ಪ್ರಯಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.