ಬೆಂಗಳೂರಿನಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ: ಕೋವಿಡ್ ಟೆಸ್ಟ್ ಡಬಲ್ ಮಾಡಲು ನಿರ್ಧಾರ- ಸಚಿವ ಸುಧಾಕರ್.

Promotion

ಬೆಂಗಳೂರು,ಡಿಸೆಂಬರ್,24,2022(www.justkannada.in):  ಚೀನಾ ಮತ್ತು ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿದ್ದಂತೆ ನಮ್ಮ ದೇಶ ಹಾಗೂ ರಾಜ್ಯದಲ್ಲೂ ಆತಂಕ ಶುರುವಾಗಿದ್ದು ಅಗತ್ಯ ಮುಂಜಾಗ್ರತಾ ಕ್ರಮಕ್ಕ ಸರ್ಕಾರ ಮುಂದಾಗಿದೆ. ಈ ನಡುವೆ ಕೋವಿಡ್ ಟೆಸ್ಟ್ ಡಬಲ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಬೆಂಗಳೂರಿನಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ಅಗತ್ಯವಿದ್ದರೇ ಕ್ರಮ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಟೆಸ್ಟಿಂಗ್ ಡಬಲ್ ಮಾಡಲು ನಿರ್ಧರಿಸಿದ್ದೇವೆ. ಅಧಿವೇಶನದಲ್ಲೂ ಮಾಸ್ಕ್ ಹಾಕಲು ಹೇಳಿದ್ದೇವೆ ಎಂದರು.

ಉಸಿರಾಟ ತೊಂದರೆ ಇರುವವರಿಗೆ ಟೆಸ್ಟಿಂಗ್ ಸಾಧ್ಯತೆ ಇದೆ.  ಹೊಸವರ್ಷವೂ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು.  ಪ್ರತ್ಯೇಕ ನಿಯಮ ಜಾರಿ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಮಾಸ್ಕ್ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ  ನೋಡುಕೊಂಡು ಮೂರ್ನಾಲ್ಕು ದಿನಗಳಲ್ಲಿ ನಿರ್ಧರಿಸುತ್ತೇವೆ. ಈ ಹಿಂದೆ ನಿತ್ಯ 2ರಿಂದ 3 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಈಗ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡುತ್ತಿದ್ದೇವೆ ಎಂದರು.

Key words: no worry – Bangalore-corona- Minister -Sudhakar.