ಯೂರಿಯ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆ ಇಲ್ಲ –ಕೃಷಿ ಸಚಿವ ಬಿ.ಸಿ.ಪಾಟೀಲ್

ಧಾರವಾಡ, ಆಗಸ್ಟ್, 18, 2020(www.justkannada.in): ರಾಜ್ಯದಲ್ಲಿ ಯೂರಿಯ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆಯಿಲ್ಲ. ಕಳೆದ ಸಾಲಿಗಿಂತ ಈ ವರ್ಷ 25% ರಷ್ಟು ಬಿತ್ತನೆ ಹೆಚ್ಚಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.jk-logo-justkannada-logo

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ ಸಚಿವ ಬಿ.ಸಿ ಪಾಟೀಲ್, ಈ ತಿಂಗಳೊಳಗೆ 60 ಸಾವಿರ ಮೆಟ್ರಿಕ್ ಟನ್ ಯೂರಿಯ ಪೂರೈಕೆಯಾಗುತ್ತಿದ್ದು, ಈ ವಾರ 37ಸಾವಿರ ಟನ್ ಯೂರಿಯ ಸರಬರಾಜು ಮಾಡಲಾಗುವುದು. ಅಗತ್ಯಕ್ಕಿಂತ ಹೆಚ್ಚು ಯಾವುದೇ ರಸಾಯಾನಿಕವನ್ನು ರೈತರು ಬಳಸಬಾರದು ಎಂದು ಹೇಳಿದರು.no shortage –fertilizer-Agriculture Minister- B.C. Patil

ಸಾಧ್ಯವಾದಷ್ಟು ರಸಗೊಬ್ಬರಗಳನ್ನು ಅನಗತ್ಯವಾಗಿ ಬಳಸುವುದನ್ನು ಬಳಕೆ ಕಡಿಮೆ ಮಾಡಿ. ಅನ್ನ ನೀಡುವ ಭೂಮಿ ವಿಷಕಾರಿಯಾಗುವುದನ್ನು ತಪ್ಪಿಸಿ ಎಂದು ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.

Key words: no shortage –fertilizer-Agriculture Minister- B.C. Patil