ಹೋಟೆಲ್ ಕೆಫೆ ಮೈಸೂರು ಸುತ್ತ ಮುತ್ತ ಸೀಲ್ ಡೌನ್ ಇಲ್ಲ- ಪಾಲಿಕೆ  ಆರೋಗ್ಯಾಧಿಕಾರಿ ಡಾ.ನಾಗರಾಜ್ ಸ್ಪಷ್ಟನೆ…

ಮೈಸೂರು,ಜೂ,13,2020(www.justkannada.in): ನಗರದ ಇಟ್ಟಿಗೆಗೂಡಿನಲ್ಲಿ ತಮಿಳುನಾಡು ಟ್ರಾವೆಲ್ ಹಿಸ್ಟರಿ ಹೊಂದಿದ್ದ ವ್ಯಕ್ತಿಗೆ ಸೋಂಕು ಪತ್ತೆ ಯಾಗಿತ್ತು. ಹೀಗಾಗಿ  ಹೋಟೆಲ್ ಕೆಫೆ ಮೈಸೂರು ಸುತ್ತ ಮುತ್ತ ಸೀಲ್ ಡೌನ್ ಇಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

ಇಟ್ಟಿಗೆಗೂಡಿನಲ್ಲಿ ಕೊರೊನಾ ಪಾಸಿಟಿವ್  ಹಿನ್ನಲೆ. ಜೂ ಸಮೀಪದ ಕೆಫೆ ಮೈಸೂರು ಹೋಟೆಲ್ ಗೆ ಡಿಹೆಚ್ಓ ಡಾ. ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್  ಭೇಟಿ  ನೀಡಿ ಪರಿಶೀಲನೆ ನಡೆಸಿದರು. ಕೊರೋನಾ ಪಾಸಿಟಿವ್ ಇರುವ ವ್ಯಕ್ತಿ ಹೋಟೆಲ್  ಬಂದಿದ್ದಾರೆ ಎನ್ನಲಾಗಿದ್ದು ಈ ಹಿನ್ನೆಲೆ ಹೋಟೆಲ್ ನ ಸಿಸಿಟಿವಿ ಪರಿಶೀಲನೆ ಮಾಡಲು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದರು.no-seal-down-hotel-cafe-mysore-mysore-health-officer-dr-nagaraj

ಪಾಸಿಟಿವ್ ವ್ಯಕ್ತಿಯ ಪ್ರೈಮರಿ ಕಾಂಟ್ಯಾಕ್ಟ್ ಪರಿಶೀಲನೆ ಮಾಡಲಾಗಿದ್ದು ಹೋಟೆಲ್ ನಲ್ಲಿದ್ದವರು ಸೇರಿದಂತೆ ಶಂಕೆ ವ್ಯಕ್ತವಾದ ವ್ಯಕ್ತಿಗಳು ಹೋಂ ಕ್ವಾರಂಟೈನ್ ಗೆ ಇರಿಸಲಾಗಿದೆ. ಜನರ ಆತಂಕ ನಿವಾರಣೆಗೆ ಇಟ್ಟಿಗೆಗೂಡಿನಲ್ಲಿ ಬಡಾವಣೆಯ ಪಾರ್ಕ್, ರಸ್ತೆಗಳಲ್ಲಿ ಪಾಲಿಕೆ ಸಿಬ್ಬಂದಿಯಿಂದ ಔಷಧಿ ಸಿಂಪಡಣೆ ಮಾಡಲಾಗಿದೆ.

ಪರಿಶೀಲನೆ ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ಡಾ.ನಾಗರಾಜು, ಹೋಟೆಲ್ ಕೆಫೆ ಮೈಸೂರು ಸುತ್ತ ಮುತ್ತ ಸೀಲ್ ಡೌನ್ ಇಲ್ಲ. ಹೋಟೆಲ್ ನ ಮ್ಯಾನೇಜರ್ ಸೇರಿ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ವ್ಯಕ್ತಿ ಕೆಫೆ ಹೋಟೆಲ್ ಗೆ ಬಂದಿದ್ರು ಅಂತಾ ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಹೋಟೆಲ್ ಬಂದ್ ಮಾಡಲಾಗಿದೆ. ಅದು ಬಿಟ್ರೆ ಸೀಲ್ ಡೌಲ್ ಮಾಡಿಲ್ಲ. ಹೋಟೆಲ್ ತೆರೆದು ಪಾರ್ಸಲ್ ಸರ್ವೀಸ್ ಗೆ ಅನುವು ಮಾಡಿಕೊಡುತ್ತೇವೆ. ಇಟ್ಟಿಗೆಗೂಡಿನ ಜನ ಹೋಟೆಲ್ ನಲ್ಲಿ ಜನ ಹೆಚ್ಚು ಸೇರುತ್ತಾರೆ ಎಂದಿರುವ ಕಾರಣ ಹೋಟೆಲ್ ಬಂದ್ ಆಗಿದೆ. ಹೋಟೆಲ್ ಗೆ ಬಂದಿದ್ದ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಜನರು ಆತಂಕಕ್ಕೆ ಒಳಗಾಗ ಬಾರದು ಎಂದು ಆರೋಗ್ಯಾಧಿಕಾರಿ ಡಾ.ನಾಗರಾಜು ಸ್ಪಷ್ಟನೆ ನೀಡಿದರು.

ಇಟ್ಟಿಗೆಗೂಡಿನಲ್ಲಿ ಪಾಸಿಟಿವ್ ಪ್ರಕರಣ ಬಂದಿರುವ ಹಿನ್ನೆಲೆ. ಇಟ್ಟಿಗೆಗೂಡಿನಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲನೆ ಮಾಡಿ. ಸದ್ಯ ಮೈಸೂರಿನಲ್ಲಿ ರಾಮಕೃಷ್ಣನಗರ ಜಿ ಬ್ಲಾಕ್, ಇಟ್ಟಿಗೂಡು ಮಾತ್ರ ಕಂಟೈನ್ಮೆಂಟ್ ಪ್ರದೇಶವಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಹೇಳಿದರು.

Key words: no seal down – hotel cafe Mysore-mysore- Health Officer -Dr. Nagaraj