ವಿದ್ಯಾರ್ಥಿಗಳು ಕೇಸರಿ ಶಾಲು, ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ

ಶಿವಮೊಗ್ಗ,ಫೆಬ್ರವರಿ,7,2022(www.justkannada.in): ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಹಾಜರಾಗಬೇಕು.  ಕೇಸರಿ ಶಾಲು ಹಿಜಾಬ್ ಧರಿಸಿ ಬರುವಂತಿಲ್ಲ. ಯಾವುದೇ ಪ್ರಚೋದನೆಗೆ ವಿದ್ಯಾರ್ಥಿಗಳು ಒಳಗಾಗಬಾರದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಿವಿಮಾತು ಹೇಳಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಕಾಲೇಜು ಅಡಳಿತ ಮಂಡಳಿ ನಿರ್ಧಾರ ಮಾಡಿರುವ ಸಮವಸ್ತ್ರವನ್ನೇ ಕಾಲೇಜಿನಲ್ಲಿ ಧರಿಸಬೇಕು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಆದೇಶ ಹೊರಡಿಸಿದ್ದು, ಇದನ್ನು ಎಲ್ಲರೂ ಪಾಲನೆ ಮಾಡಬೇಕು ಅಂತ ಹೇಳಿದರು.

ಈ ಹಿಂದೆ ಹಿಜಾಬ್‌ ಗೆ ಧರಿಸುವಿಕೆ ಬಗ್ಗೆ ಈ ಮಟ್ಟಿನ ಒಲವು ಇರಲಿಲ್ಲ, ಈಗ ಮಕ್ಕಳು ಕಡ್ಡಾಯವಾಗಿ ನಾವು ಹಿಜಾಬ್ ಧರಿಸಿ ಬರುತ್ತೇನೆ ಅಂತ ಹೇಳುತ್ತಿರುವುದು ಅನುಮಾನಿಗಳಿಗೆ ಕಾರಣವಾಗಿದೇ, ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕಂಡು ಹಿಡಿಯುವ ಸಲುವಾಗಿ ತನಿಖೆ ನಡೆಸಲು ಪೋಲಿಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: Students –hijab- Home Minister -Araga Jnanendra.