ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ: ಆದಷ್ಟು ಬೇಗ ಸ್ಯಾಂಟ್ರೋ ರವಿ ಬಂಧನ- ಎಡಿಜಿಪಿ ಅಲೋಕ್ ಕುಮಾರ್.

Promotion

ಮೈಸೂರು,ಜನವರಿ,10,2023(www.justkannada.in): ಸ್ಯಾಂಟ್ರೋ ರವಿಗಾಗಿ  ಮೈಸೂರು,ಮಂಡ್ಯ, ರಾಮನಗರ ಬೆಂಗಳೂರಿನಲ್ಲಿ ಹುಡುಕಾಟ ನಡೆಸಲಾಗಿದೆ. ಆದಷ್ಟು ಬೇಗ ಸ್ಯಾಂಟ್ರೋ ರವಿ ಬಂಧಿಸುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, 8 ದಿನವಾಗಿದೆ ಆತ ಸಿಗಬೇಕಾಗಿತ್ತು. ಕೆಲವೊಮ್ಮೆ ತಂತ್ರಜ್ಞಾನ ಇದ್ದರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಾಗ ಸಿಗುವುದು ಕಷ್ಟ. ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ. ಅದೇ ಕಾರಣಕ್ಕೆ‌ ನಾನು ಇಲ್ಲಿ ಬಂದು ಮಾಹಿತಿ‌ ಪಡೆದಿದ್ದೇ‌ನೆ. ಆದಷ್ಟು ಬೇಗ ಸ್ಯಾಂಟ್ರೋ ರವಿ ಬಂಧನವಾಗಲಿದೆ ಎಂದರು.

ಸ್ಯಾಂಟ್ರೋ ರವಿ ವಿರುದ್ದ ಎಫ್ ಐ ಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬ್ಯಾಂಕ್ ಖಾತೆ ಜಪ್ತಿ ಮಾಡುವ ಬಗ್ಗೆ ಇಂದು ನಿರ್ಧಾರ ಮಾಡುತ್ತೇವೆ.  ಬೆಂಗಳೂರಿನ ಆರ್ ಆರ್ ನಗರದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಎಲ್ಲಾ ಅಗತ್ಯ ದಾಖಲೆ ಜಪ್ತಿ ಮಾಡಲಾಗಿದೆ. ಎಷ್ಟು ಬ್ಯಾಂಕ್ ಖಾತೆ ಇದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಆಸ್ತಿ ಜಪ್ತಿ ಬಗ್ಗೆಯೂ ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆ ರೀತಿಯ ಹಣದಿಂದ ವ್ಯವಹಾರ ಮಾಡಿದ್ದಾರಾ ಇಲ್ಲವಾ ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Key words: No pressure –police-Arrest- Santro Ravi – soon – ADGP- Alok Kumar.