ಜ.15 ರಂದು ಯೋಗಾಥಾನ್ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ- ಮೈಸೂರು ಡಿಸಿ ಡಾ: ಕೆ.ವಿ. ರಾಜೇಂದ್ರ ಸೂಚನೆ.

ಮೈಸೂರು,ಜನವರಿ,10,2023(www.justkannada.in): ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 8 ಗಂಟೆಯಿಂದ ರೇಸ್ ಕೋರ್ಸ್ ಮೈದಾನದಲ್ಲಿ ಯೋಗಥಾನ್ ನಡೆಯಲಿದೆ. ಈ ಕಾರ್ಯಕ್ರಮ 80 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ‌ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಜಿಲ್ಲೆಗೆ 80 ಸಾವಿರ ಜನ ಭಾಗವಹಿಸುವಂತೆ ಗುರಿ ನಿಗದಿಯಾಗಿದ್ದು, www.yogathon2022.com ನಲ್ಲಿ  ನೋಂದಣಿ ಮಾಡಿಕೊಂಡು ನೀಡಲಾಗುವ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿಸಿ ಜನವರಿ 15 ರಂದು ಯೋಗಾಥಾನ್ ಗೆ ಪ್ರವೇಶಿಸುವುದು ಎಂದರು.

ಶಾಲಾ, ಕಾಲೇಜು, ವಸತಿ ಶಾಲೆಗಳಿಂದ ನೊಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ‌ಬರುವ ವ್ಯವಸ್ಥೆ ಮಾಡಿ ಎಂದರು.

ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯ, ವೇದಿಕೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿಗಳನ್ನು ವಹಿಸಿ, ಎಂಟ್ರಿ ಗೇಟ್ ಗಳ ವ್ಯವಸ್ಥೆ ಮಾಡಿ ಇದರಿಂದ ಜನ ಸಂದಣಿ ಉಂಟಾಗುವುದು ಕಡಿಮೆಯಾಗುತ್ತದೆ ಎಂದರು.

ಶಿಷ್ಠಾಚಾರ, ಭದ್ರತೆ ಹಾಗೂ ಸಾರಿಗೆ ವ್ಯವಸ್ಥೆಯ ಬಗ್ಗೆ ಸೂಕ್ತ ಕ್ರಮವಹಿಸಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ವೇದಿಕೆ, ಸ್ವಚ್ಚತೆ , ಉಪಹಾರ ಹಾಗೂ ಆಂಬುಲೆನ್ಸ್  ವ್ಯವಸ್ಧೆ  ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಆದಷ್ಟು ಚಿಕ್ಕ ಮಕ್ಕಳು ಯೋಗ ಕಾರ್ಯಕ್ರಮಕ್ಕೆ ಭಾಗವಹಿಸದಂತೆ ನೋಡಿಕೊಳ್ಳಿ ಎಂದು ಕೆವಿ ರಾಜೇಂದ್ರ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್ .ಲೋಕನಾಥ್ , ಯುವಜನ‌ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ  ರೋಹಿತ್ ಜಿಲ್ಲಾ ಆಯುಷ್ ಅಧಿಕಾರಿ ಡಾ ಪುಷ್ಪ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಸಹಾಯಕ ನಿರ್ದೇಶಕರಾದ ಹರೀಶ್ ಟಿ.ಕೆ. ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Prepare –systematically- Yogathon -15th Jan-Mysore DC- Dr: K.V. Rajendra